ಮೈಸೂರು

ಜಮೀನು ಖಾತೆ ಮಾಡಿ ಕೊಡಲು ರೈತರಿಂದ ಲಂಚಕ್ಕೆ ಬೇಡಿಕೆಯಿಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ,ಸಹಾಯಕ ಎಸಿಬಿ ಬಲೆಗೆ

ಮೈಸೂರು,ಮೇ.6:- ಜಮೀನು ಖಾತೆ ಮಾಡಿ ಕೊಡಲು ರೈತರಿಂದ ಲಂಚಕ್ಕೆ ಬೇಡಿಕೆಯಿಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕ ಎಸಿಬಿ ಬಲೆಗೆ ಬಿದ್ದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಮಹಿಳೆಯೋರ್ವರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿ ತಂಡ ನಂಜನಗೂಡಿನ ದೇವಿರಮ್ಮನಹಳ್ಳಿ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿಕಂಠ ಹೊಲ್ದೂರು ಮಠ ಎಸಿಬಿ ಬಲೆಗೆ ಬಿದ್ದ  ಗ್ರಾಮ ಲೆಕ್ಕಾಧಿಕಾರಿಯಾಗಿದ್ದು,  20 ಗುಂಟೆ ಖುಷ್ಕಿ ಜಮೀನು ಖಾತೆ ಮಾಡಿಕೊಡಲು ಜಮೀನು ಮಾಲೀಕರ ಬಳಿಯೇ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ನೊಂದ ಮಹಿಳೆ ಎಸಿಬಿ ಡಿವೈ ಎಸ್ ಪಿ ಅವರಿಗೆ ದೂರು ನೀಡಿದ್ದರು. ಪೊಲೀಸರ ಸೂಚನೆ ಮೇರೆಗೆ ಮಣಿಕಂಠ ಅವರಿಗೆ ಹತ್ತು ಸಾವಿರ ಹಣ ನೀಡುವುದಾಗಿ ಹೇಳಿ ಜಮೀನು ಮಾಲೀಕರ ಮನೆಗೆ ಕರೆಸಿಕೊಳ್ಳಲಾಗಿತ್ತು.

ಹಣ ಪಡೆಯುತ್ತಿದ್ದಾಗ ಮಣಿಕಂಠ ಹಾಗೂ ಆತನ ಸಹಾಯಕನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: