
ಮೈಸೂರು
ಗೃಹಿಣಿ ಕಾಣೆಯಾಗಿದ್ದಾರೆ : ಮಾಹಿತಿ ನೀಡಲು ಮನವಿ
ಮೈಸೂರು,ಮೇ.6:- ನಂಜನಗೂಡು ತಾಲೂಕಿನ ಆಲಂಬೂರು ಮಂಟಿ ಗ್ರಾಮದ ಮಹಿಳೆಯೋರ್ವರು ಗಂಡನ ಮನೆಯಿಂದ ಶುಕ್ರವಾರ ಹೊರಹೋಗಿದ್ದು, ವಾಪಸ್ ಮನೆಗೆ ಬಂದಿಲ್ಲ ಎಂದು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಸರು ಹೇಮಲತಾ(19), ಮನೆಯಿಂದ ಹೊರ ಹೋಗುವಾಗ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದರು. ಕಡುಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಸುಳಿವು ದೊರೆತಲ್ಲಿ ಬಿಳಿಗೆರೆ ಪೊಲೀಸ್ ಠಾಣೆ ದೂ.ಸಂ.08221-221745 ಸಂಪರ್ಕಿಸುವಂತೆ ಕೋರಲಾಗಿದೆ. (ಕೆ.ಎಸ್,ಎಸ್.ಎಚ್)