ಮೈಸೂರು

ಸಾವಿನ ರಹಸ್ಯ ಬಯಲು ಮಾಡಿದ ಮರಣೋತ್ತರ ಪರೀಕ್ಷೆ : ಆರೋಪಿ ಬಂಧನ

ವೃದ್ಧನ ಸಾವಿನ ರಹಸ್ಯವನ್ನು ಮರಣೋತ್ತರ ಪರೀಕ್ಷೆ ಸುಳಿವು ನೀಡಿದ ಘಟನೆ ನಂಜನಗೂಡು ತಾಲೂಕು ಹರದನಹಳ್ಳಿಯಲ್ಲಿ ನಡೆದಿದ್ದು,ಉದಯಗಿರಿ ಪೊಲೀಸ್ ರು ವೃದ್ಧನ  ಪತ್ನಿಯನ್ನು  ಬಂಧಿಸಿದ್ದಾರೆ.

ಬಂಧಿತಳನ್ನು ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ಶಾಂತಮ್ಮ (60)ಎಂದು ಗುರುತಿಸಲಾಗಿದೆ. ಪತಿ ರಾಜಣ್ಣ (65) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. 2016 ರ ಜೂನ್ ತಿಂಗಳಲ್ಲಿ  ಘಟನೆ ನಡೆದಿತ್ತು. ರಾಜಣ್ಣ ಹಾಗೂ ಶಾಂತಮ್ಮ ದಂಪತಿ ಮೈಸೂರಿನ ಸುಭಾಷ್ ನಗರದ ಕಟ್ಟಡ ನಿರ್ಮಾಣ ಕಾಮಗಾರಿಯ ಕಾವಲು ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ನಡೆದ ವೇಳೆಗೆ ಶಾಂತಮ್ಮ ಪಾತ್ರೆಯಿಂದ ರಾಜಣ್ಣನ ತಲೆಗೆ ಹೊಡೆದು ತನ್ನ  ಗ್ರಾಮ ಸೇರಿಕೊಂಡಿದ್ದಳು ಎನ್ನಲಾಗಿದೆ. ಹಲ್ಲೆಗೊಳಗಾದ ರಾಜಣ್ಣ ರಸ್ತೆಯಲ್ಲೇ ಮೃತಪಟ್ಟಿದ್ದ. ಉದಯಗಿರಿ ಪೊಲೀಸರು ಅಪರಿಚಿತ ಶವವೆಂದು ಪರಿಗಣಿಸಿ ಶವಾಗಾರಕ್ಕೆ ಸಾಗಿಸಿದ್ದರು.ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇತ್ತೀಚೆಗೆ ಹಲ್ಲೆಯಿಂದ ಸಾವನ್ನಪ್ಪಿರುವುದಾಗಿ ವರದಿ ನೀಡಿದ್ದಾರೆ.

ವರದಿಯನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಪತ್ನಿ ಶಾಂತಮ್ಮಳನ್ನುನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ನಿಜ ಸಂಗತಿ ಬಯಲಾಗಿದೆ.

Leave a Reply

comments

Related Articles

error: