ಕ್ರೀಡೆ

20-ಟ್ವೆಂಟಿ ಬ್ಯಾಟಿಂಗ್: ಅಗ್ರ ರ್ಯಾಂಕಿಂಗ್ ಕಾಯ್ಡುಕೊಂಡ ಕೊಹ್ಲಿ

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಐಸಿಸಿ ಟ್ವೆಂಟಿ–20 ಬ್ಯಾಟ್ಸ್‍ಮನ್‍ಗಳ -ವಿಶ್ವಕ್ರಮಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವಿರಾಟ್‌, ಒಟ್ಟು 799 ಪಾಯಿಂಟ್ಸ್‌ ಹೊಂದಿದ್ದಾರೆ.

ತಂಡದ ಪ್ರದರ್ಶನದಲ್ಲಿ ಭಾರತ ಎರಡನೇ ರ್ಯಾಂಕಿಂಗ್ ಪಡೆದಿದೆ. ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಫಿಂಚ್‌ 771 ಪಾಯಿಂಟ್ಸ್‌ ಹೊಂದಿದ್ದರೆ, ಮ್ಯಾಕ್ಸ್‌ವೆಲ್‌ 763 ಪಾಯಿಂಟ್ಸ್‌ ಸಂಪಾದಿಸಿದ್ದಾರೆ.

ಬಲಗೈ ಬ್ಯಾಟ್ಸ್ಮನ್‌ ಕೊಹ್ಲಿ ಮೂರು ಪ್ರಕಾರಗಳ ಕ್ರಿಕೆಟ್‌’ನಲ್ಲಿ ಅಗ್ರ ಐದು ಜನರ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಭಾರತದ ಏಕೈಕ ಆಟಗಾರ. ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ಕೊಹ್ಲಿ, ಏಕದಿನ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Leave a Reply

comments

Related Articles

error: