ಪ್ರಮುಖ ಸುದ್ದಿಮೈಸೂರು

ಸರ್ಕಾರದಿಂದಿಲ್ಲ ಡಯಾಲಿಸಿಸ್ ಚಿಕಿತ್ಸೆ : ಕೇಳುವರಿಲ್ಲ ರೋಗಿಗಳ ಗೋಳು

ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತ ರೋಗಿಯ ಪೋಷಕರು

ಮೈಸೂರು,ಮೇ.6 : ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಡಯಾಲಿಸಿಸ್ ಚಿಕಿತ್ಸೆಯನ್ನ ಕೈಬಿಟ್ಟಿರುವುದರಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ನಗರದ ಡಯಾಲಿಸಿಸ್ ರೋಗಿಗಳು ಸಾಮೂಹಿಕವಾಗಿ ಅಲವತ್ತುಕೊಂಡರು.

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಜಿ.ಎಂ.ರಘು ಮಾತನಾಡಿ, ಈ ಚಿಕಿತ್ಸೆಯ ಕೋಡ್ ತೆಗೆದು ಹಾಕಿದ್ದು ಇದರಿಂದ  ಈ ಯೋಜನೆಗಳಡಿ ಖಾಸಗಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡಲು ನಿರಾಕರಣೆ ಮಾಡಿದ್ದು ಇದರಿಂದ ಬಡವ ರೋಗಿಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದರು.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ಸೂಚಿಸುತ್ತಾರೆ. ಸಂತ್ರಸ್ಥರು ಪ್ರತಿ ವಾರ 2 ರಿಂದ 3 ಬಾರಿ ಕಿಡ್ನಿ ಡಯಾಲಿಸಿಸ್ ಮಾಡಿಸಬೇಕಾದ ಅಗತ್ಯವಿದ್ದು. ಹೀಗೆ ಡಯಾಲಿಸಿಸ್ ಮಾಡಿಸಲು ಪ್ರತಿ ತಿಂಗಳು 24 ಸಾವಿರ ರೂ. ಹಣದ ಅಗತ್ಯವಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಬೇಕು ಸಾಮೂಹಿಕವಾಗಿ ಮನವಿ ಮಾಡಿದರು.

ವಂದನಾಬಾಯಿ, ವಿ.ರಮೇಶ್, ಶ್ರೀನಿಧಿ, ಮಹದೇವ್ ಇನ್ನಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: