ಕ್ರೀಡೆ

ಸ್ನೂಕರ್ : 29ನೇ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಪಂಕಜ್‌ ಅಡ್ವಾಣಿ

ಪುಣೆ : ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಟೂರ್ನಿಯ ಚಾಂಪಿಯನ್‌ಷಿಪ್ ಅನ್ನು ಪಂಕಜ್ ಅಡ್ವಾಣಿ  ಗೆದ್ದುಕೊಂಡಿದ್ದಾರೆ. ಗುರುವಾರ ನಡೆದ ಫೈನಲ್‌ನಲ್ಲಿ 6–0 ಇಂದ ರೈಲ್ವೆ ತಂಡದ ಪಾಂಡುರಂಗಯ್ಯ ಅವರ ವಿರುದ್ಧ ಗೆಲುವು ಸಾಧಿಸಿದರು.

ಪಂಕಜ್ ಅವರಿಗೆ ಇದು 29ನೇ ರಾಷ್ಟ್ರೀಯ ಪ್ರಶಸ್ತಿ. ಬಿಲಿಯರ್ಡ್ಸ್‌ ಮತ್ತು 6 ರೆಡ್ ಸ್ನೂಕರ್ ಮತ್ತು 15 ರೆಡ್‌ ಸ್ನೂಕರ್ ವಿಭಾಗಗಳಲ್ಲಿ ಅಷ್ಟೇ ಸಂಖ್ಯೆಯ ಪ್ರಶಸ್ತಿ ಗೆದ್ದು ದಾಖಲೆ ಮಾಡಿದ್ದಾರೆ. ಈ ಸಾಧನೆ ಮಾಡಿರುವ ಭಾರತದ ಏಕೈಕ ಆಟಗಾರ ಪಂಕಜ್.

ಪಿವೈಸಿ ಹಿಂದು ಜಿಮ್‌ಖಾನಾದಲ್ಲಿ ನಡೆದ ಸೆಮಿಫೈನಲ್‌ನಲ್ಲಿ 5–2 ರಿಂದ ನವದೆಹಲಿಯ ಸಂದೀಪ್ ಗುಲಾಟಿ ವಿರುದ್ಧ ಗೆದ್ದು ಫೈನಲ್ ತಲುಪಿದ್ದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಮೋಘ ಆಟವಾಡಿದ ಅವರು 83 (50)-1, 52-34, 76(75)-0, 65(64)-18, 82(50)-25, 79(78)-28ರಿಂದ ಪಾಂಡುರಂಗಯ್ಯ ವಿರುದ್ಧ ಜಯಿಸಿದರು. ಟೂರ್ನಿಯಲ್ಲಿ ಪಂಕಜ್, ಪಾಂಡುರಂಗಯ್ಯ, ಮಲ್ಕೀತ್ ಸಿಂಗ್, ಸಂದೀಪ್ ಗುಲಾಟಿ, ಲಕ್ಷ್ಮಣ್ ರಾವತ್, ಎ.ಅರವಿಂದ್ ಕುಮಾರ್, ಧರ್ಮೇಂದ್ರ ಲಿಲಿ, ಅನುಜ್ ಉಪ್ಪಳ ಅವರು ಕ್ರಮವಾಗಿಒಂದರಿಂದ ಎಂಟನೆ ಸ್ಥಾನ ಪಡೆದರು.

Leave a Reply

comments

Related Articles

error: