ಮೈಸೂರು

ಕಾರು ಮತ್ತು ದ್ವಿಚಕ್ರವಾಹನದ ನಡುವೆ ಡಿಕ್ಕಿ : ವ್ಯಕ್ತಿ ಸಾವು

ಮೈಸೂರು,ಮೇ.6:- ಕಾರು ಮತ್ತು ದ್ವಿಚಕ್ರವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಮೈಸೂರು ನಂಜನಗೂಡು ರಸ್ತೆಯಲ್ಲಿ ನಡೆದಿದೆ.

ಮೃತರನ್ನು ನಂಜನಗೂಡಿನ ನಿವಾಸಿ ಬಸವಣ್ಣ(50)ಎಂದು ಗುರುತಿಸಲಾಗಿದ್ದು, ಇವರು ದ್ವಿಚಕ್ರವಾಹನದಲ್ಲಿ ವಿಮಾನ ನಿಲ್ದಾಣದ ರಸ್ತೆ ವಿಭಜಕದ ಬಳಿ ತಿರುವು ಪಡೆಯುತ್ತಿರುವಾಗ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: