ಮೈಸೂರು

ರೌಡಿ ಶೀಟರ್ ಗಳಿಗೆ ಆಯುಕ್ತರಿಂದ ನೀತಿಪಾಠ

ಮೈಸೂರಿನಲ್ಲಿ ಶುಕ್ರವಾರ ರೌಡಿಶೀಟರ್ ಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಶಾವ್ ನೀತಿ ಪಾಠ ಬೋಧಿಸಿದರು. ಶುಕ್ರವಾರ ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ ಡಿಸಿಪಿ ನೇತೃತ್ವದ ತಂಡ ಅಪಾರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು.  ಬಳಿಕ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಮೈದಾನದಲ್ಲಿ ರೌಡಿಶೀಟರ್ ಗಳನ್ನು ಕರೆಸಿದ ಆಯುಕ್ತರು ಅವರಿಗೆ ನೀತಿ ಪಾಠ ಹೇಳಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್  ಮೈದಾನದಲ್ಲಿ ನಗರದ 50ಕ್ಕೂ ಅಧಿಕ ರೌಡಿಶೀಟರ್ ಗಳನ್ನು ಕರೆಸಿದ ಆಯುಕ್ತರು ನೀವು ಅನಗತ್ಯ ರೌಡಿಸಂ ಮಾಡುವುದನ್ನು ಬಿಟ್ಟುಬಿಡಿ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಕಲಿಯಿರಿ. ನೀವು ಏನೇ ಚಟುವಟಿಕೆಗಳನ್ನು ನಡೆಸಿದರೂ ಅದರ ಮಾಹಿತಿ ನಮಗೆ ಲಭ್ಯವಾಗಲಿದೆ. ನಿಮ್ಮ ಮೇಲೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ. ಅದರಿಂದ ಅವುಗಳನ್ನೆಲ್ಲ  ಬಿಟ್ಟುಬಿಡಿ. ರೌಡಿಸಂ ತೋರಿದರೆ ಮುಂದೆ ತುಂಬಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದರು. ರೌಡಿ ನಿಗ್ರಹದಳ ನಗರದಲ್ಲಿ ಸದಾ ಗಸ್ತು ತಿರುಗಲಿದ್ದು, ನಿಮ್ಮ ಮೇಲೆ ಕಣ್ಣಿರಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭ ಡಿಸಿಪಿಗಳಾದ ಶೇಖರ್, ರುದ್ರಮುನಿ, ಎಸಿಪಿಗಳಾದ  ರಾಜಶೇಖರ್, ಮಲಿಕ್, ಉಮೇಶ್ ಶೇಟ್, ಸಿಸಿಬಿ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: