
ದೇಶಪ್ರಮುಖ ಸುದ್ದಿ
ಲಾಭದಾಯಕ ಹುದ್ದೆ ಹೊಂದಿಲ್ಲ: ಸಚಿನ್ ತೆಂಡುಲ್ಕರ್
ನವದೆಹಲಿ (ಮೇ 6): ಬಿಸಿಸಿಐ ಮತ್ತು ಐಪಿಎಲ್ನಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಕ್ರಿಕೆಟ್ ವಲಯದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಸಿಐಗೆ ಪತ್ರ ಮುಖೇನ ಉತ್ತರಿಸಿದ್ದ ಸಚಿನ್ ತೆಂಡುಲ್ಕರ್ ಮತ್ತು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಮತ್ತೊಮ್ಮೆ ನೋಟಿಸ್ ಜಾರಿಯಾಗಿದೆ.
ಆದರೆ, ಬಿಸಿಸಿಐ ಎತ್ತಿರುವ ಈ ವಿಚಾರಕ್ಕೆ ಸಚಿನ್ ಪ್ರತಿಕ್ರಿಯಿಸಿರುವ ಸಚಿನ್, ಇದರಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸದು. ಮುಂಬೈ ಇಂಡಿಯನ್ಸ್ ತಂಡದ ಯಾವುದೇ ಲಾಭದಾಯಕ ಹುದ್ದೆಯನ್ನೂ ನಾನು ಹೊಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಈ ಗೊಂದಲಕ್ಕೆ ಬಿಸಿಸಿಐ ತೆರೆ ಎಳೆಯಬೇಕು ಎಂದು ಸಚಿನ್ ಮನವಿ ಮಾಡಿದ್ದಾರೆ.
2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದ ಸಚಿನ್ ತೆಂಡುಲ್ಕರ್ 2015ರಲ್ಲಿ ಭಾರತೀಯ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. (ಎನ್.ಬಿ)