ಮೈಸೂರು

ಆಳುಗುಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

ಮೈಸೂರಿನ  ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಹಾತ್ಮಗಾಂಧಿ ರಸ್ತೆಯ ಜೆ.ಎಸ್.ಎಸ್ ಆಸ್ಪತ್ರೆಯಿಂದ ಗುಂಡೂರಾವ್ ನಗರ ಮಾರ್ಗವಾಗಿ ಎಸ್.ಟಿ.ಪಿ-ಬಿ ವರೆಗೆ 800 ಮಿಮೀ ಮತ್ತು 900 ಮಿ.ಮೀ ವ್ಯಾಸದ ಆರ್.ಸಿ.ಸಿ ಒಳಚರಂಡಿ ಕೊಳವೆಮಾರ್ಗವನ್ನು ಅಳವಡಿಸಿ ಆಳುಗುಂಡಿಗಳನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಶುಕ್ರವಾರ ಶಾಸಕ ಎಂ.ಕೆ.ಸೋಮಶೇಖರ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್.ಸಿ.ಸುಬ್ರಹ್ಮಣ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಸ್.ರಾಜಗೋಪಾಲ್ ಮತ್ತು ಸಹಾಯಕ ಅಭಿಯಂತರ ಬಿ.ಶಿವಣ್ಣ ಭಾಗವಹಿಸಿದ್ದರು.

Leave a Reply

comments

Related Articles

error: