ದೇಶಪ್ರಮುಖ ಸುದ್ದಿ

ಚಂಡಮಾರುತ ಪೀಡಿತ ಒಡಿಶಾ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ

ಭುವನೇಶ್ವರ (ಮೇ 6): ಫೋನಿ ಚಂಡಮಾರುತದಿಂದ ಹಾನಿಗೀಡಾಗಿರುವ ಒಡಿಶಾ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ಭೇಟಿ ನೀಡಿದರು. ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ರಾಜ್ಯಪಾಲ ಗಣೇಶ ಇಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಅವರು ಸ್ವಾಗತಿಸಿದರು.

ಒಡಿಶಾದ ಪುರಿ ಸೇರಿದಂತೆ ಇತರೆ ಪ್ರದೇಶಗಳನ್ನು ಮೋದಿ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಲಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಲಿದ್ದಾರೆ. ಫೋನಿ ಚಂಡಮಾರುತ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಈಗಾಗಲೇ 1029 ಕೋಟಿ ರೂಗಳನ್ನು ಬಿಡುಗಡೆ ಮಾಡಿತ್ತು.

ಈ ಮುನ್ನೆಚ್ಚರಿಕೆಯಿಂದ ಸಾವುನೋವುಗಳ ಸಂಖ್ಯೆ ಈ ಬಾರಿ ಕಡಿಮೆಯಾಗಿತ್ತು. ಇದುವರೆಗು ಫೋನಿ ಚಂಡಮಾರುತಕ್ಕೆ 34 ಮಂದಿ ಬಲಿಯಾಗಿದ್ದಾರೆ.  (ಎನ್.ಬಿ)

Leave a Reply

comments

Related Articles

error: