ದೇಶಪ್ರಮುಖ ಸುದ್ದಿವಿದೇಶ

ಎನ್‍ಡಿಎ – ಯುಪಿಎ ಮಧ್ಯೆ ಫುಟ್ಬಾಲ್ ಆಗಿದ್ದೇನೆ: ವಿಜಯ್ ಮಲ್ಯ!

ನವದೆಹಲಿ: ಎನ್‍ಡಿಎ ಮತ್ತು ಯುಪಿಎ ಸರ್ಕಾರಗಳ ವೈಷಮ್ಯದ ಮಧ್ಯೆ ಸಿಲುಕಿ ಫುಟ್ಬಾಲ್‍ನಂತಾಗಿದ್ದೆನೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಮೇಲಿರುವ ಆರೋಪಗಳು ರಾಜಕೀಯಪೂರಿತ ಎಂದು ಬಿಂಬಿಸಲು ಅವರು ಪ್ರಯತ್ನಸಿರುವಂತಿದೆ.

ಯಾವುದೇ ನ್ಯಾಯ ನಿರ್ಣಯಗಳಿಲ್ಲದೆ ಎನ್‌ಡಿಎ – ಯುಪಿಎ ಟೀಮ್‌ಗಳು ನನ್ನನ್ನು ಫುಟ್ಬಾಲ್‌‌ಗೆ ಒದೆಯುವಂತೆ ಒದೆಯುತ್ತಿವೆ ಎಂದು ಬ್ರಿಟನ್‌ನಲ್ಲಿ ಕುಳಿತ ಮಲ್ಯ ಹೇಳಿದ್ದಾರೆ. ಇತ್ತೀಚೆಗೆ 2017-18 ರ ಕೇಂದ್ರ ಬಜೆಜ್‌ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೈಟ್ಲಿ ಸಾಲ ಮರುಪಾವತಿಸದೆ ವಿದೇಶಗಳಿಗೆ ಜಂಪ್ ಆದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೆ ತರುವುದಾಗಿ ಪರೋಕ್ಷವಾಗಿ ವಿಜಯ್‌ ಮಲ್ಯ ವಿಷಯ ಪ್ರಸ್ತಾಪಿಸಿ ಹೇಳಿದ್ದರು.  ಹೀಗಾಗಿ ಬ್ರಿಟನ್‌‌ನಲ್ಲಿ ಕುಳಿತಿರುವ ವಿಜಯ್‌ ಮಲ್ಯ ಈ ಹೇಳಿಕೆ ನೀಡಿ ಟ್ವೀಟ್‌‌ ಮಾಡಿದ್ದಾರೆ.

“ಸಿಬಿಐ ಕೂಡ ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಮಾಡಿದೆ. ಈ ಆರೋಪಗಳಿಂದ ನನಗೆ ಶಾಕ್‌ ಆಗಿದೆ” ಎಂದು ಮಲ್ಯ ಹೇಳಿಕೊಂಡಿದ್ದಾರೆ. ವಿಜಯ್‌ ಮಲ್ಯ ಐಡಿಬಿಐ ಬ್ಯಾಂಕ್‌‌ನಲ್ಲಿ 720 ಕೋಟಿ ರೂ. ಮರುಪಾವತಿಸದಿದ್ದಕ್ಕೆ ಕಳೆದ ವಾರ ಸಿಬಿಐ ಕೋರ್ಟ್‌ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್‌‌ ಜಾರಿಗೊಳಿಸಿತ್ತು. ವಿಜಯ್‌ ಮಲ್ಯ ವಿವಿಧ ಬ್ಯಾಂಕ್‌ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಮರುಪಾವತಿಸದೆ ಕಳೆದ ವರ್ಷದ ಮಾರ್ಚ್‌‌ 2ರಂದು ದೇಶ ತೊರೆದಿದ್ದರು.

Leave a Reply

comments

Related Articles

error: