ಮೈಸೂರು

ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬೇಕು :ಶಾಸಕ ಪಿ.ವಾಸು

ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಾಸಕ ಪಿ.ವಾಸು ಹೇಳಿದರು.

ಮೈಸೂರಿನ ಸ್ಕೌಟ್ಸ್ ಆ್ಯಂಡ್ಸ್ ಗೈಡ್ಸ್ ಮೈದಾನದಲ್ಲಿ ಸಿಬಿಎಸ್ ಇ, ಐಸಿಎಸ್ ಇ ಆ್ಯಂಡ್ ಸ್ಟೇಟ್ ಪ್ರೈವೇಟ್ ಸ್ಕೂಲ್ಸ್ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ವತಿಯಿಂದ ನಡೆದ ಶಿಕ್ಷಣ ಮೇಳವನ್ನು ಶಾಸಕ ವಾಸು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಕ್ಷೇತ್ರದಲ್ಲೂ ಸರ್ಕಾರ ಸಹಾಯಧನ ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತದೆ. ಆದರೆ ಖಾಸಗಿ‌ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಪ್ರೋತ್ಸಾಹ ಹಾಗೂ ಅನುದಾನಗಳು ಸಿಗಲ್ಲ. ಮೈಸೂರು ರಾಜರು ನೂರು ವರ್ಷದ ದೂರದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ನಿರ್ಮಿಸಿದರು. ಆದರೆ ಹಲವು ಸರ್ಕಾರಗಳು ಬಂದರೂ ಸ್ವಾತಂತ್ರ್ಯದ ನಂತರ, ಮೂಲ ಸೌಕರ್ಯ ನೀಡಲು ಮತ್ತು ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಈ ಶಿಕ್ಷಣ ಮೇಳ ಶಿಕ್ಷಣ ಕ್ಷೇತ್ರದಲ್ಲಿ ಬೆಳಕು ಚೆಲ್ಲಿ ಪೋಷಕರು  ಹಾಗೂ ಮಕ್ಕಳಲ್ಲಿ ಜಾಗೃತಿ ನೀಡಲಿದೆ. ಉತ್ತಮ ಮೂಲಭೂತ ಸೌಕರ್ಯಗಳಿರುವ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗುತ್ತಾರೆ. ಈ ವೇಳೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಶಿಕ್ಷಣ ನೀಡಲು ಮುಂದಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಿಐಎಸ್ ಪಿಎಂಎಎಂ ಅಧ್ಯಕ್ಷ ಸುಧಾಕರ ಶೆಟ್ಟಿ, ಉಪಾಧ್ಯಕ್ಷ ವೆಂಕಟೇಶ್, ರವೀಂದ್ರ ಸ್ವಾಮಿ, ಸ್ವರೂಪಿಣಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: