ಮನರಂಜನೆ

ಸಿಂಪಲ್ ಹುಡುಗನ 5ನೇ ಜನರೇಷನ್

ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ ಎಂದು ಹೊಸ ರೀತಿಯಲ್ಲಿ ಪ್ರೇಮ ಕಥೆ ಹೇಳಿದ್ದ ಪ್ರವೀಣ್ ಈಗ ‘5 ನೇ ಜನರೇಷನ್’ ಎಂಬ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ.
ಗುರುವೇಂದ್ರ ಶೆಟ್ಟಿ ಎಂಬ ಹೊಸ ನಿರ್ದೇಶಕರು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ಕೊಡಗಿನ ಕುವರಿ ನಿಧಿ ಸುಬ್ಬಯ್ಯ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಒಂದು ಸುತ್ತು ಸುತ್ತಾಡಿ ಕನ್ನಡಕ್ಕೆ ಮತ್ತೆ ಬಂದಿರುವ ನಿಧಿ, ಇತ್ತೀಚಿಗೆ ವಿಜಯರಾಘವೇಂದ್ರ ನಟನೆಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಈಗ 5 ನೇ ಜನರೇಷನ್ ಸಿನಿಮಾದಲ್ಲಿ ಮತ್ತೆ ನಾಯಕಿಯಾಗಿದ್ದಾರೆ. ಈ ಮೂಲಕ ಕನ್ನಡದ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಜೆ.ಜೆ. ಎಂಟರ್‌ಪ್ರೈಸ್ ಲಾಂಛನದಲ್ಲಿ ಜಗದೀಶ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಸತತವಾಗಿ ನಡೆದು ಮಾತಿನ ಭಾಗ ಪೂರ್ಣಗೊಂಡಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.  ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ  ಅವಿನಾಶ್, ಸಾಧುಕೋಕಿಲ, ಎಡಕಲ್ಲು ಗುಡ್ಡ ಚಂದ್ರಶೇಖರ್, ಕೀರ್ತಿಶ್ರೀ, ಎಸ್.ವಿ. ರಾವ್, ಸ್ವಪ್ನ ರಾಜ್, ಕಷ್ಣಮೂರ್ತಿ, ರೂಪೇಶ್, ನಿತಿನ್, ಪ್ರೇಮ್ ರಾಜ್, ರಾಘವೇಂದ್ರ ಕೋಡಿ, ಕುಮಾರ್, ದಿನೇಶ್ ಬಾಬು ಮುಂತಾದವರಿದ್ದಾರೆ.

 

Leave a Reply

comments

Related Articles

error: