ಮೈಸೂರು

ಗೋಬಿ ಮಾಡುತ್ತಿದ್ದ ಗಾಡಿಗೆ ಆಟೋ ಡಿಕ್ಕಿ : ಕುದಿಯುತ್ತಿದ್ದ ಎಣ್ಣೆಯಿಂದ ಹಲವರಿಗೆ ಗಾಯ

ಮೈಸೂರು,ಮೇ.7:- ಚಾಲಕನ ನಿಯಂತ್ರಣ ತಪ್ಪಿದ   ಆಟೋವೊಂದು ಗೋಬಿ ಮಂಚೂರಿ ಮಾಡುತ್ತಿದ್ದ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹೆಚ್ಚಿನವರಿಗೆ ಕುದಿಯುತ್ತಿದ್ದ ಎಣ್ಣೆ ಮೈಮೇಲೆ ಬಿದ್ದ ಕಾರಣ ಸುಟ್ಟಗಾಯಗಳಾದ ಘಟನೆ ಹೂಟಗಳ್ಳಿಯ ಕೆಆರ್ ಎಸ್ ರಸ್ತೆಯಲ್ಲಿ ನಡೆದಿದೆ.

ಅಟೋದಲ್ಲಿ ಗಾರ್ಮೆಂಟ್ಸ್ ಒಂದರ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಅತಿ ವೇಗದಲ್ಲಿ ಬಂದ ಚಾಲಕ ರಸ್ತೆ ಬದಿ ನಿಂತಿದ್ದ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಎರಡು ದ್ವಿಚಕ್ರವಾಹನಗಳಿಗೂ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಬಾಲಕಿ ಶ್ವೇತಾ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕೆ.ಆರ್.ಆಸ್ಪತ್ರೆ ಮತ್ತು ಹೂಟಗಳ್ಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಗೆ ಕಾರಣನಾದ ಆಟೋ ಚಾಲಕ ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದ್ದಾನೆ. ಈ ಕುರಿತು ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: