ಕರ್ನಾಟಕಪ್ರಮುಖ ಸುದ್ದಿ

ಮಹಿಳೆಗೆ ಕಿರುಕುಳ ಆರೋಪ : ಸ್ವಿಗ್ಗಿ ಡೆಲಿವರಿ ಬಾಯ್ ಬಂಧಿಸಿ ವಿಚಾರಣೆ

ಬೆಂಗಳೂರು (ಮೇ 7): ವಿಳಾಸ ಕೇಳುವ ನೆಪದಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದ್ದು, ‘ಸ್ವಿಗ್ಗಿ’ ಡೆಲಿವರಿ ಬಾಯ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಮೂಲದ 26 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನೆಲೆಸಿದ್ದು, ಏ.28ರಂದು ರಾತ್ರಿ 10ರ ಸುಮಾರಿಗೆ ಎಚ್‌ಎಸ್‌ಆರ್‌ ಲೇಔಟ್‌ನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದರು. ಈ ವೇಳೆ ಸ್ವಿಗ್ಗಿ ಡೆಲಿವರಿ ಬಾಯ್‌ ಮಂಜುನಾಥ್‌ ಯುವತಿಯ ಬಳಿ ಬಂದು ಊಟ ಪಾರ್ಸೆಲ್‌ ಕೊಡಬೇಕಿದೆ. ಈ ವಿಳಾಸ ಎಲ್ಲಿ ಬರುತ್ತದೆ ನೋಡಿ ಎಂದು ಮೊಬೈಲ್‌ನಲ್ಲಿ ವಿಳಾಸ ತೋರಿಸುತ್ತಿದ್ದ.

ಯುವತಿ ವಿಳಾಸ ನೋಡುವಾಗ ಆಕೆಯ ಎದೆ ಮುಟ್ಟಿ, ಕೆಳಗೆ ತಳ್ಳಿದ್ದ. ಈ ವೇಳೆ ಯುವತಿ ಜೋರಾಗಿ ಚೀರಿಕೊಂಡ ತಕ್ಷಣ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ದ್ವಿಚಕ್ರ ವಾಹನ ಸಂಖ್ಯೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಳಾಸ ಕೇಳುವಾಗ ಯುವತಿ ಮೈ ತಾಗಿತ್ತು. ಅಷ್ಟಕ್ಕೆ ಯುವತಿ ಗಲಾಟೆ ಮಾಡಿದರೆಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: