ದೇಶಪ್ರಮುಖ ಸುದ್ದಿ

ಆಪ್ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡಲು ಶಿಫಾರಸು?

ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್‌ ಕೊಡಲು ಐಟಿ ನಿರ್ಧರಿಸಿದೆ ಎಂದು ದೆಹಲಿ ಮಾಧ್ಯಮಗಳು ವರದಿ ಮಾಡಿವೆ. ಆಮ್ ಆದ್ಮಿ ಪಕ್ಷಕ್ಕೆ ನೀಡಿರುವ ರಾಜಕೀಯ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.

27 ಕೋಟಿ ರೂ. ದೇಣಿಗೆ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಕಪೋಲಕಲ್ಪಿತ ಲೆಕ್ಕ ವರದಿ ಸಲ್ಲಿಸಿರುವ ಕಾರಣ ಆಮ್ ಆದ್ಮಿಗೆ ಇರುವ ರಾಜಕೀಯ ಪಕ್ಷದ ಸ್ಥಾನಮಾನ ರದ್ದುಪಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದೆ ಎನ್ನಲಾಗುತ್ತಿದೆ.

ದೆಹಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಪ್‌, ಪಂಜಾಬ್, ಗೋವಾದಲ್ಲಿ ಅಧಿಕಾರಕ್ಕೇರಲು ಹಣಾಹಣಿ ನಡೆಸುತ್ತಿದೆ. ನಾಳೆ ಪಂಜಾಬ್, ಗೋವಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಆಪ್‌ಗೆ ಆಘಾತ ನೀಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

Leave a Reply

comments

Related Articles

error: