ದೇಶ

ಒಡಿಶಾಗೆ ಒಂದು ಕೋಟಿ ರೂ. ನೆರವು ನೀಡಿದ ನಟ ಅಕ್ಷಯ್ ಕುಮಾರ್

ಮುಂಬೈ,ಮೇ 7-ಫೋನಿ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿರುವ ಒಡಿಶಾಗೆ ನಟ ಅಕ್ಷಯ್ ಕುಮಾರ್ ಒಂದು ಕೋಟಿ ರೂ. ಸಹಾಯ ಧನ ನೀಡಿದ್ದಾರೆ. ಈ ಹಣವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.

ಫೋನಿ ಚಂಡಮಾರುತದ ಕಾರಣ ಒಡಿಶಾದಲ್ಲಿ ಸುಮಾರು 34 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ. ಚಂಡಮಾರುತದ ಕಾರಣ ಅಪಾರ ಆಸ್ತಿ ನಷ್ಟವಾಗಿದ್ದು ಎಲ್ಲೆಡೆಯಿಂದ ಸಹಾಯ ಹಸ್ತ ಹರಿದು ಬರುತ್ತಿದೆ.

ಫೋನಿ ಚಂಡಮಾರುತ ಪೀಡಿತ ಒಡಿಶಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದು, 1000 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಪ್ರಾಣ ಹಾಗೂ ಆಸ್ತಿ ಹಾನಿಯನ್ನು ಕನಿಷ್ಠ ಮಟ್ಟಕ್ಕಿಳಿಸಲು ಉಪಗ್ರಹಗಳು ಸೇರಿದಂತೆ ತಂತ್ರಜ್ಞಾನದ ಪಡೆದಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಹಿಂದೆ ಕೇರಳ, ಚೆನ್ನೈ ಚಂಡಮಾರುತ ಹೊಡೆತಕ್ಕೆ ತುತ್ತಾದಾಗಲೂ ಅಕ್ಷಯ್ ಸಹಾಯ ಹಸ್ತ ಚಾಚಿದ್ದರು. ಅಷ್ಟೇ ಅಲ್ಲ ಭಾರತ್ ಕೇ ವೀರ್ ವೆಬ್ಸೈಟ್ ಮೂಲಕ ಸೈನಿಕರ ಕುಟುಂಬಗಳಿಗೂ ಸಹಾಯ ಮಾಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: