ದೇಶಪ್ರಮುಖ ಸುದ್ದಿ

ಲೋಕಸಭಾ ಚುನಾವಣೆ: ಹಂತದಿಂದ ಹಂತಕ್ಕೆ ಕುಸಿಯುತ್ತಿದೆ ಮತದಾನ ಪ್ರಮಾಣ!

ನವದೆಹಲಿ (ಮೇ 7): ಹದನೇಳನೇ ಲೋಕಸಭೆ ಚುನಾವಣೆಗೆ ಈಗಾಗಲೇ ಐದು ಹಂತದ ಮತದಾನ ಅಂತಿಮಗೊಂಡಿದ್ದು, ಹಂತದಿಂದ ಹಂತಕ್ಕೆ ಮತ ಚಲಾವಣೆ ಪ್ರಮಾಣ ಕುಸಿಯುತ್ತಿದೆ.

ಸೋಮವಾರ ನಡೆದ ಐದನೇ ಹಂತದಲ್ಲಿ ಕೇವಲ ಶೇ.63.87 ಮತದಾನವಾಗಿದೆ. ಗೋಚರಿಸುತ್ತದೆ.ಮೊದಲ ಮೂರೂ ಹಂತದ ಮತದಾನ ಪ್ರಮಾಣವು ಈ ಬಾರಿ ದಾಖಲೆಯ ಮತದಾನವಾಗುವ ಮುನ್ಸೂಚನೆ ನೀಡುತ್ತಿದೆ. ಆದರೆ ಕಳೆದೆರೆಡು ಹಂತದಲ್ಲಿ ಮತ ಪ್ರಮಾಣ ಕುಸಿಯುತ್ತಿರುವುದು ರಾಜಕೀಯ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ.

ಸೋಮವಾರ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಿತ್ತು. ಅದರಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.78.15 ಮತದಾನ ಅತಿ ಹೆಚ್ಚಿನ ಮತದಾನವಾಗಿದ್ದರೆ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.19.55ರಷ್ಟು ಮತದಾನವಾಗಿದೆ. ಆದರೆ ಮೊದಲ ನಾಲ್ಕು ಹಂತದ ಮತದಾನಕ್ಕೆ ಹೋಲಿಸಿದರೆ ಇದು ಉತ್ತಮ ಮತ ಚಲಾವಣೆಯಾಗಿದೆ

ಹಂತಗಳ ಮತ ಪ್ರಮಾಣ :
  • ಮೊದಲ ಹಂತದ ಶೇ.69.50 ; ಎರಡನೇ ಹಂತ ಶೇ.69.44 ; ಮೂರನೇ ಹಂತ 68.40 ;  ನಾಲ್ಕನೇ ಹಂತ 65.51;  ಐದನೇ ಹಂತ 63.87.

ಮೊದಲ ಹಂತದಲ್ಲಿ ಶೇ.69.50 ಮತ ಚಲಾವಣೆಯಾಗಿತ್ತು. ಇದು ಪ್ರತಿ ಹಂತದಲ್ಲಿಯೂ ಮತದಾರರು ಗಣನೀಯವಾಗಿ ಆಸಕ್ತಿ ಕಳೆದುಕೊಳ್ಳುವುದು ಕಂಡು ಬಂದಿದೆ.

ರಾಜ್ಯವಾರು ಮತ ಪ್ರಮಾಣ ಇಂತಿದೆ :
  • ಬಿಹಾರ-ಶೇ.57.76 ; ಜಮ್ಮು ಮತ್ತು ಕಾಶ್ಮೀರ- ಶೇ.19.55 ; ಮಧ್ಯಪ್ರದೇಶ- ಶೇ.68.98 ;  ರಾಜಸ್ಥಾನ-ಶೇ.67.73 ;  ಉತ್ತರಪ್ರದೇಶ- ಶೇ.57.93 ;  ಪಶ್ಚಿಮ ಬಂಗಾಳ-ಶೇ.78.15 ;  ಜಾರ್ಖಂಡ್-ಶೇ.65.12 (ಎನ್.ಬಿ)

Leave a Reply

comments

Related Articles

error: