ಕರ್ನಾಟಕಪ್ರಮುಖ ಸುದ್ದಿ

ದೇವೇಗೌಡರನ್ನು ಗೆಲ್ಲಿಸಲು ಡಿಸಿಎಂ ಪ್ರಯತ್ನವನ್ನೇ ಮಾಡಿಲ್ಲ! ಮಾಜಿ ಸುರೇಶ್ ಗೌಡ ವ್ಯಾಖ್ಯಾನ

ತುಮಕೂರು (ಮೇ 7): ತುಮಕೂರಿನಲ್ಲಿ ಜೆಡಿಎಸ್ ದೇವೇಗೌಡರನ್ನು ಗೆಲ್ಲಿಸುವ ಪ್ರಯತ್ನವನ್ನು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಯಾವ ಪ್ರಯತ್ನವನ್ನೂ ಮಾಡಿಯೇ ಇಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ವ್ಯಾಖ್ಯಾನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದವರನ್ನೇ ನಿಲ್ಲಿಸುವ ಮನಸ್ಸಿತ್ತು. ಆದರೆ ಅನಿವಾರ್ಯವಾಗಿ ದೇವೇಗೌಡರಿಗೆ ಬೆಂಬಲ ಸೂಚಿಸಬೇಕಾಯಿತು. ಹಾಗಾಗಿ ಪರಮೇಶ್ವರ ಕೂಡ ದೇವೇಗೌಡರ ಪರ ಪ್ರಚಾರವನ್ನೇ ಮಾಡಲಿಲ್ಲ ಎಂದು ಗಂಭೀರವಾಗಿ ನುಡಿದರು.

ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೇ ಸೋಲಿಸೋದು ನಿಜ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲೇ ಬಿಜೆಪಿ 10 ಸಾವಿರ ಲೀಡ್ ತೆಗೆದುಕೊಳ್ಳುತ್ತದೆ. ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ ಕೂಡ ದೇವೇಗೌಡರನ್ನ ಗೆಲ್ಲಿಸುವುದಕ್ಕೆ ಒಂದು ರೂಪಾಯಿ ಕೆಲಸ ಮಾಡಿಲ್ಲ. ಅಲ್ಲದೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಎಲ್ಲೂ ಸಭೆ ಮಾಡಿ ಗೆಲ್ಲಿಸೋಕೆ ಶ್ರಮಿಸಿಲ್ಲ ಎಂದು ಹೇಳಿದ್ದಾರೆ. ಒಂದೊಮ್ಮೆ ತುಮಕೂರಿನಲ್ಲಿ ದೇವೇಗೌಡರು ಸೋತರೆ ಅದಕ್ಕೆ ಕಾಂಗ್ರೆಸ್-ಜೆಡಿಎಸ್ ಕಾರಣವೇ ಹೊರತು ಬಿಜೆಪಿ ಅಲ್ಲ ಎಂದರು. (ಎನ್.ಬಿ)

Leave a Reply

comments

Related Articles

error: