ಮೈಸೂರು

ವಿ.ವಿ.ಪುರಂ ಪೊಲೀಸರಿಂದ ಇಬ್ಬರು ಸರಗಳ್ಳರ ಬಂಧನ  : ಹೊಂಡಾ ಡಿಯೋ ಸ್ಕೂಟರ್ ಹಾಗೂ 20 ಗ್ರಾಂ ತೂಕದ ಚಿನ್ನದ ಸರ ವಶ

ಮೈಸೂರುಮಮೇ.7:-  07/05/2019 ರಂದು ವಿವಿ ಪುರಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರುಗಳು ತಮ್ಮ ಠಾಣೆಯಲ್ಲಿ ದಾಖಲಾಗಿರುವ ಸ್ವತ್ತು ಕಳುವು ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿ ಪತ್ತೆ ಬಗ್ಗೆ ಗಸ್ತಿನಲ್ಲಿದ್ದಾಗ ವಿವಿ ಮೊಹಲ್ಲಾದ ಕಾಳಿದಾಸ ರಸ್ತೆಯಲ್ಲಿ ಚಿನ್ನದ ಸರ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು  ಆಸೀಫ್ ಬಿನ್ ಸೈಯದ್ ಅಹಮದ್, (21), ಗಾರೆ ಕೆಲಸ, ಕಾಳಮ್ಮನಗುಡಿ ರಸ್ತೆ, ಶ್ರೀರಂಗಪಟ್ಟಣ ಟೌನ್, ಮಂಡ್ಯ ಜಿಲ್ಲೆ, ಜಗನ್ನಾಥಗೌಡ ಜಿ.ಡಿ @ ಜಗದೀಶ್ ಬಿನ್ ದೊಡ್ಡರಂಗಪ್ಪ, (28), ಗಾರೆ ಕೆಲಸ, ಗಿಡಿಗಡನಹಳ್ಳಿ ಗ್ರಾಮ, ಮೊದಲೂರು ಅಂಚೆ, ಶಿರಾ ತಾಲೂಕು, ತುಮಕೂರು ಜಿಲ್ಲೆ ಎಂದು ಗುರುತಿಸಲಾಗಿದೆ. ಇವರನ್ನು ವಿಚಾರಣೆ ಮಾಡಿದಾಗ   11.12.2018 ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಗೆ ವಿಚಾರ ಮಾಡಲಾಗಿ ವಿಜಯನಗರ 4ನೇ ಹಂತದಲ್ಲಿ   ಸುಮಾ ಅವರಿಂದ ಕಿತ್ತುಕೊಂಡು ಹೋಗಿದ್ದ   75.000ರೂ. ಬೆಲೆ ಬಾಳುವ 20 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದರಿಂದ ಆರೋಪಿಗಳಿಂದ  ಮಾಲುಗಳನ್ನು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು)  ಮುತ್ತುರಾಜು ಎಂ ರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎ.ಸಿ.ಪಿ.ರವರಾದ ಧರಣೇಶ್ ನೇತೃತ್ವದಲ್ಲಿ ವಿವಿ ಪುರಂ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಹೆಚ್.ಎನ್.ವಿನಯ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನ, ದಿವಾಕರ್, ಸುರೇಶ್, ಮಂಜುನಾಥ್‍ರವರು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: