ಮೈಸೂರು

ಬನ್ನಿಮಂಟಪದಲ್ಲಿ ರಂಜಾನ್ ಪ್ರಯುಕ್ತ ಒಂದು ತಿಂಗಳು ಉಪವಾಸವಿರುವವರಿಗಾಗಿ “ಆಶ್” ತರಕಾರಿ ಪಾನೀಯ ವಿತರಣೆ

ಮೈಸೂರು,ಏ.8:- ಮೈಸೂರಿನ ಬನ್ನಿಮಂಟಪ, ಟಿಪ್ಪು ಮಸೀದಿ ಹತ್ತಿರ, ಹುಡ್ಕೊ, 2ನೇ ಹಂತ ಇಲ್ಲಿ   ಎಸ್.ಕೆ. ಸೈಯದ್ ಮುದಸಿರ್ ಪಾಷ, ಸಮಾಜ ಸೇವಕರು ಮತ್ತು ಇವರ ಗೆಳೆಯರ ಬಳಗದವರು ರಂಜಾನ್ ಪ್ರಯುಕ್ತ   7.5.2019 ರಿಂದ 6.6.2019 ರವರೆಗೆ ಉಪವಾಸವಿರುವವರಿಗಾಗಿ ಪ್ರತಿದಿನ ಸಂಜೆ 5.30 ಕ್ಕೆ 30 ದಿನಗಳು ಅಕ್ಕಿ, ತರಕಾರಿಯಿಂದ ತಯಾರಿಸಿದ ಪಾನೀಯ “ಆಶ್” ಅನ್ನು ವಿತರಣೆ ಮಾಡಲಿದ್ದಾರೆ.

7.5.2019 ರಂದು ಸಂಜೆ 5.30 ಕ್ಕೆ ದುವಾ ಪ್ರಾರ್ಥನೆ ಸಲ್ಲಿಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಈ ಸಂದರ್ಭ  ಎಸ್.ಕೆ.ಸೈಯದ್ ಮುದಸಿರ್ ಪಾಷ, ಇಮ್ರಾನ್, ಸೈಯದ್ ಸಲೀಂ, ತಾಜಮುಲ್ ಪಾಷ, ನಾಸಿರ್ ಖಾನ್, ಫೈರೋಜ್ ಖಾನ್, ಅಬ್ರಾರ್ ಅಹಮದ್, ಹಾರೂನ್ ರಷೀದ್ ಮತ್ತಿತರರಿದ್ದರು.

ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ : 9972830579 ಅನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: