
ಕರ್ನಾಟಕಪ್ರಮುಖ ಸುದ್ದಿ
ಸಿಎಂ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಶಾಸಕರ ಪ್ಲಾನ್!?
ಬೆಂಗಳೂರು (ಮೇ 8): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಶಾಸಕರು ಪ್ಲಾನ್ ಮಾಡಿಕೊಂಡಿದ್ದು, ಸಂಪುಟ ಸಭೆ ಮುಗಿದ ಬಳಿಕ ಎಲ್ಲಾ ಕಾಂಗ್ರೆಸ್ ಶಾಸಕರೊಂದಿಗೆ ಅಹವಾಲು ಆಲಿಸುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಯವರು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿ ಶಾಸಕರೊಂದಿಗೆ ಚರ್ಚೆ ನಡೆಸಬೇಕು ಎಂದು ಸಮಾನ ಮನಸ್ಕರು, ಅತೃಪ್ತ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರಿಂದ ಒತ್ತಡ ಹಾಕಲಾಗಿದೆ.
ಅಲ್ಲದೇ, ಕಾಂಗ್ರೆಸ್ ಶಾಸಕರು ಲಿಖಿತ ರೂಪದಲ್ಲಿ ಸಮಸ್ಯೆಯ ಪಟ್ಟಿ ಮಾಡಿಕೊಂಡಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಬೇಕಾದ ಅನುದಾನ, ಯೋಜನೆ, ಸಮಸ್ಯೆಗಳ ಬಗ್ಗೆ ಬರೆದಿಟ್ಟುಕೊಂಡಿರುವ ಕಾಂಗ್ರೆಸ್ ಶಾಸಕರು ಸಂಪುಟ ಸಭೆಯ ಬಳಿಕ ಅಹವಾಲು ಆಲಿಸಬೇಕೆಂದು ಸಿಎಂಗೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ. (ಎನ್.ಬಿ)