ಮೈಸೂರು

ಮುಕ್ತದಿನದಲ್ಲಿ ಹಲವು ವಿಷಯಗಳ ಅನಾವರಣ

ಮೈಸೂರಿನ ಮಾನಸ ಗಂಗೋತ್ರಿಯ ಥೆರಪಿ ಪಾರ್ಕ್ ನಲ್ಲಿ  ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಶುಕ್ರವಾರ ಮುಕ್ತದಿನದ ಅಂಗವಾಗಿ  ವಸ್ತು ಪ್ರದರ್ಶನ ಮತ್ತು ಮಾಹಿತಿಕಾರ್ಯಕ್ರಮ ಆಯೋಜಿಸಿತ್ತು.

ಇಲ್ಲಿ ಮಕ್ಕಳಿಗೆ ತಿಳಿದಿಲ್ಲದ ಎಷ್ಟೋ ವಿಷಯಗಳನ್ನು ತಜ್ಞರು ತಿಳಿಸಿದರು. ಪರಿಸರ, ಪುಟ್ಟ ಮಗು ಭೂಮಿಗೆ ಬರುವಾಗ ಯಾವ ರೀತಿ ಇರಲಿದೆ. ನಂತರ ಅದರ ಬೆಳವಣಿಗೆ, ಮೆದುಳಿನಲ್ಲಿ ಯಾವ ರೀತಿ ರಕ್ತಸಂಚಾರವಾಗಲಿದೆ ಸೇರಿದಂತೆ ಕಿವಿಗೆ ಹಾನಿಯಾದರೆ ಯಾವ ರೀತಿ ಚಿಕಿತ್ಸೆಯನ್ನು ಪಡೆಯಬೇಕು. ವೈದ್ಯರ ಸಲಹೆ ಇಲ್ಲದೇ  ಕಿವಿಗೆ ಯಾಕೆ ಯಂತ್ರೋಪಕರಣಗಳನ್ನು ಬಳಸಬಾರದು ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆದರು. ಈ ಸಂದರ್ಭ ವಿಶೇಷ ಮಕ್ಕಳಿಗಾಗಿ ನಿಧಿ ಶೋಧನೆ, ಸ್ಟ್ಯಾಕಿಂಗ್‍ರೇಸ್, ಡ್ರೆಸ್ಸಿಂಗ್ ರೇಸ್, ಆಬ್‍ಸ್ಟೈಕಲ್‍ರೇಸ್ ಹಾಗೂ ಮೂಸಿಕಲ್ ಛೇರ್ ಸೇರಿದಂತೆ ಹಲವು ಆಟಗಳನ್ನು ಆಯೋಜಿಸಲಾಗಿತ್ತು.

ವಿಷ್ಣುವರ್ಧನ್ ಅಭಿನಯದ ಸುಪ್ರಭಾತ, ಅಮೀರ್ ಖಾನ್ ಅಭಿನಯದ ತಾರೆ ಜಮೀನ್ ಪರ್, ಬರ್ಫಿ ಚಿತ್ರದ ಕೆಲವು ದೃಶ್ಯಗಳನ್ನು ತೋರಿಸಲಾಯಿತು.

ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಬಸವೇಗೌಡ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: