ಸುದ್ದಿ ಸಂಕ್ಷಿಪ್ತ

ಜೆಎಸ್ಎಸ್ ಸಂಗೀತ ಸಭಾದಿಂದ ಮೇ.11ರಿಂದ ಬಸವ ಜಯಂತಿ : ಸಂಗೀತ ಕಛೇರಿ

ಮೈಸೂರು,ಮೇ.8 : ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಬಸವ ಜಯಂತಿ ಸಂಗೀತ ಕಛೇರಿ ‘ವಚನ-ಪ್ರವಚನ’ ಅನ್ನು ಮೇ 11 ಮತ್ತು.12ರಂದು ಸಂಜೆ 6 ಗಂಟೆಗೆ  ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ದಿ.11ರ ಅಂತರಾಷ್ಟ್ರೀಯ ಖ್ಯಾತಿಯ ಮೃದಂಗ ವಿದ್ವಾಂಸ ಕಾರೈಕುಡಿ ಮಣಿ ಮುತ್ತವರ ತಂಡದಿಂದ ತಾಳ ಮತ್ತು ಲಯದ ಪ್ರಾತ್ಯಕ್ಷಿಕೆ, ಸಂಗೀತ ಕಛೇರಿ ಇದೆ.

ಮೇ. 12ರ  ವಿದ್ವಾನ್ ಕೆ.ವಿ.ಕೃಷ್ಣ ಪ್ರಸಾದ್ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ವಿದ್ವಾನ್ ವಿಶ್ವಜೀತ್ ಮತ್ತೂರು ವಯೋಲಿನ್ ನಲ್ಲಿ, ವಿದ್ವಾನ್ ಎಸ್.ಅಶೋಕ ಮೃದಂಗದಲ್ಲಿ ಹಾಗೂ ವಿದ್ವಾನ್ ಶರತ್ ಕೌಶಿಕ್ ಘಟಂ ನಲ್ಲಿ ಸಾಥ್ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: