ಸುದ್ದಿ ಸಂಕ್ಷಿಪ್ತ

ನೆಲದ ಹುಣ್ಣು ಕವನ ಸಂಕಲನ ಬಿಡುಗಡೆ .12.

ಮೈಸೂರು,ಮೇ.8 : ಸಂಪವಹನ ಪ್ರಕಾಶನದಿಂದ ಬಿ.ಎಂ. ಪ್ರವೀಣ್ ಅವರ ‘ನೆಲದ ಹುಣ್ಣು’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯನ್ನು ಮೇ.12ರ ಸಂಜೆ 4.30ಕ್ಕೆ ಮನೆಯಂಗಳದಲ್ಲಿ ಏರ್ಪಡಿಸಲಾಗಿದೆ.

ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ  ಪ್ರಾದೇಶಿಕ ಕಾರ್ಯದರ್ಶಿ ಎಸ್.ಮಹಾಲಿಂಗೇಶ್ವರ್ ಕೃತಿ ಬಿಡುಗಡೆಗೊಳಿಸುವರು, ವಿಮರ್ಶಕ ಡಾ.ಸಿ.ನಾಗಣ್ಣ ಕೃತಿ ಕುರಿತು ಮಾತನಾಡುವರು. ವಿಶ್ರಾಂತ ಪ್ರಾಧ್ಯಾಪಕ ಡಾ.ಕಾಳೇಗೌಡ ನಾಗವರ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಕರ್ಮಿ ಜನಾರ್ದನ್ (ಜೆನ್ನಿ) ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ, ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕವಿ ಬಿ.ಎಂ.ಪ್ರವೀಣ್, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: