ಮೈಸೂರು

ಎಚ್.ಡಿ.ಕೋಟೆಯ ಅಂತರಸಂತೆ ಉಪಠಾಣೆಯ ಚೆಕ್‌ ಪೋಸ್ಟ್‌ ನಲ್ಲಿ ನಿತ್ಯವೂ ವಸೂಲಿ ದಂದೆ : ಜಾಣ ಕುರುಡು ಪ್ರದರ್ಶಿಸುತ್ತಿದ್ದಾರಾ ಮೇಲಧಿಕಾರಿಗಳು?

ಮೈಸೂರು,ಮೇ.8:- ಇದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಕಥೆ. ಮೈಸೂರು ಜಿಲ್ಲೆಯಲ್ಲಿ  ನಿತ್ಯವೂ ವಸೂಲಿ ದಂದೆ ನಡೆಯುತ್ತದೆ. ಪೊಲೀಸರಿಂದಲೇ   ವಸೂಲಿ ದಂಧೆ ನಡೆಯುತ್ತಿದ್ದು,  ಎಚ್.ಡಿ.ಕೋಟೆಯ ಅಂತರಸಂತೆ ಉಪಠಾಣೆಯ ಚೆಕ್‌ ಪೋಸ್ಟ್‌ ನಲ್ಲಿ ನಿತ್ಯವೂ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೇರಳಕ್ಕೆ ಸಾಗುವ ವಾಹನಗಳೇ ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಓರ್ವರ  ಟಾರ್ಗೆಟ್ ಆಗಿದ್ದು,  ನಿಮ್ಮ ವಾಹನದಲ್ಲಿ ಏನು ಸಾಗಿಸಿದರೂ ಅಲ್ಲಿ ಮಾತ್ರ  ಡೋಂಟ್ ಕೇರ್  ಎನ್ನುತ್ತಾರಾ ಎನ್ನುವ ಪ್ರಶ್ನೆ ಮೂಡುವುದು ಸಹಜ.  ಸಿಟಿಯೊಳಗೆ ಹೈ ಅಲರ್ಟ್ ಇದ್ದರೂ, ನಗರದಾಚೆ ಖುಲ್ಲಂ ಖುಲ್ಲಾ ವಸೂಲಿ ದಂದೆ ನಡೆಯುತ್ತಿದೆ ಎನ್ನಲಾಗಿದೆ. ನಿಮ್ಮ ವಾಹನದಲ್ಲಿ ಕಳ್ಳತನದ ಮಾಲು ಸಾಗಿಸಿದರೂ ಕ್ಯಾರೇ ಅನ್ನಲ್ಲ. ಪೊಲೀಸರ ಕೈ ಬಿಸಿ ಮಾಡಿದರೆ ಸಾಕು, ನಿಮ್ಮ‌ ಕೆಲಸ ತುಂಬಾ ಸುಲಭವಾಗಲಿದೆ.  ಅಕ್ರಮವಾಗಿ ಏನು ಬೇಕಾದರೂ ಸಾಗಿಸಿ, ಹಣ ಕೊಡಿ ಸಾಕಷ್ಟೇ ಎಂದು ಮುಖ್ಯ ಪೇದೆ  ಓರ್ವರು ವಸೂಲಿ ದಂದೆ ನಡೆಸಿದ್ದಾರಂತೆ. ಒಂದೇ ಕಡೆ ಕಳೆದ 12ವರ್ಷಕ್ಕೂ ಹೆಚ್ಚು ಕಾಲ‌ ಕೆಲಸ ಮಾಡುತ್ತಿದ್ದು, ಪ್ರಭಾವ ಬಳಸಿ ಎಚ್.ಡಿ ಕೋಟೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಸೂಲಿ ಬಗ್ಗೆ ಚಕಾರ ಎತ್ತಿದರೆ ಕೇಸ್ ಬೀಳಲಿದೆ.  ವಸೂಲಿ ದಂದೆಯ ಕರಾಳ ಮುಖ ಇದೀಗ  ಬಯಲಾಗಿದೆ. ಕೋಳಿ, ತರಕಾರಿ, ಅಕ್ಕಿ ತುಂಬಿದ ಲಾರಿಗಳೇ ಈತನ ಟಾರ್ಗೆಟ್ ಆಗಿದ್ದು, ನೇರವಾಗಿ ಬಂದು ಹಣ ಕೊಡದಿದ್ದರೆ  ನೆಕ್ಸ್ ಟೈಂ ನಿಮಗೆ ಅಲ್ಲಿ ಪ್ರವೇಶವಿಲ್ಲ. ಚೆಕ್ ಪೋಸ್ಟ್ ಹೊರಗೆ ನಿಮ್ಮ ಗಾಡಿ ನಿಲ್ಲುವಂತೆ ಈ ಪೊಲೀಸಪ್ಪ ಮಾಡುತ್ತಿದ್ದು, ಪೇದೆಯ ಹಿಂದೆ   ಕೆಲ ಅಧಿಕಾರಿಗಳ ನೆರಳು ಇದೆ ಎನ್ನಲಾಗುತ್ತಿದೆ. ಹೀಗಿದ್ದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಮಾಹಿತಿ ಸಿಕ್ಕಿಲ್ವಾ? ಸಿಕ್ಕಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: