
ಮೈಸೂರು
23ರ ಬೆಳಿಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭ : ಸಕಲ ಸಿದ್ಧತೆ ; ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು,ಮೇ.9:- ಮೇ.23ರ ಬೆಳಿಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು, ಪಡುವಾರಹಳ್ಳಿಯಲ್ಲಿರುವ ಮತ ಎಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆಯೂ ನಡೆದಿದೆ ಎಂದು ಜಿಲ್ಲಾಧಿಕಾರಿ/ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮೈಸೂರಿನಲ್ಲಿಂದು ಮಾದ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮತೆಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆಯೂ ನಡೆದಿದ್ದು, ಭದ್ರತೆಯಿದೆ. 45ರಷ್ಟು ಸಿಸಿಟಿವಿ ಕಣ್ಗಾವಲಿದೆ. 24ಗಂಟೆಯೂ ಬೆಳಕಿನ ವ್ಯವಸ್ಥೆಯಿದೆ. ಯಾವುದೇ ಸಮಯದಲ್ಲಿ ಇನ್ಸಪೆಕ್ಟರ್ ರ್ಯಾಂಕ್ ಗಿಂತ ಹೆಚ್ಚಿನ ದರ್ಜೆಯ ಅಧಿಕಾರಿ, ನಮ್ಮ ಕಡೆಯಿಂದ ಓರ್ವರು ದಿನದ 24ಗಂಟೆಯೂ ಕರ್ತವ್ಯದಲ್ಲಿರುತ್ತಾರೆ ಎಂದರು.
ಮತೆಣಿಕೆಗೆ ಕೂಡ ಸಿದ್ಧತೆ ನಡೆದಿದೆ. 8 ಮತಕ್ಷೇತ್ರಗಳ 6ಕ್ಷೇತ್ರಗಳಿಗೆ ಎರಡೆರಡು ಎಣಿಕೆ ಕೊಠಡಿ, 14ಮೇಜು ಇಟ್ಟು ಮೇಜಿಗೆ ಮೂರು ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಚಾಮುಂಡೇಶ್ವರಿ ಮತ್ತು ಚಾಮರಾಜ ಕ್ಷೇತ್ರಗಳಿಗೆ ಸಿಂಗಲ್ ಕಂಬೈನ್ಡ್ ಹಾಲ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡಿಂಗ್ ವ್ಯವಸ್ಥೆಯಿದೆ. ಚುನಾವಣಾಧಿಕಾರಿಯ ಸಮಕ್ಷಮದಲ್ಲಿ ಪೋಸ್ಟಲ್ ಬ್ಯಾಲೆಟ್ ಪೇಪರ್ ಮತೆಣಿಕೆ ನಡೆಯಲಿದ್ದು, 8ಗಂಟೆಗೆ ಇವಿಎಂ ಮತಯಂತ್ರಗಳ ಮತೆಣಿಕೆ ನಡೆಯಲಿದೆ. ಅಭ್ಯರ್ಥಿಗಳಿಗೆ, ಏಜೆಂಟರುಗಳಿಗೆ ಮುಂದಿನ ವಾರದಲ್ಲಿ ತರಬೇತಿಯನ್ನು ಇಟ್ಟುಕೊಳ್ಳಲಾಗುವುದು. ಪ್ರತಿಯೊಂದು ಹಂತದಲ್ಲಿಯೂ ಕ್ರಾಸ್ ವೆರಿಫಿಕೇಶನ್ ಗೆ ಅವಕಾಶವಿದೆ. ಮೂರ್ನಾಲ್ಕು ಸೀಲ್ ಇಂತಹ ಸ್ಥಳದಲ್ಲಿ ಇದೆಯಾ, ಇಲ್ಲವಾ? ಅದೇ ಬೂತ್ ನ ಮಶೀನ್ ಇದೆಯಾ, ಇಲ್ಲವಾ?ಎಂಬುದನ್ನು ಪಾರದರ್ಶಕವಾಗಿಯೇ ಮಾಡಲಾಗತ್ತೆ. ಪ್ರತಿ ಟೇಬಲ್ ಗೆ ಓರ್ವ ಅಧಿಕಾರಿ, ಓರ್ವ ಸಿಬ್ಬಂದಿ, ಮೈಕ್ರೋ ಒಬ್ಸರ್ವರ್ ಇರುತ್ತಾರೆ. ನಮಗೀಗ 120ಪರ್ಸೆಂಟೇಜ್ ಗೆ ಲೆಕ್ಕ ಮಾಡಲು ಒಟ್ಟು 8ಮತಕ್ಷೇತ್ರಗಳಿಗೆ 14ಮೇಜು, ಪ್ರತಿಮೇಜಿಗೆ ಮೂವರು ಸಿಬ್ಬಂದಿ ಇರುತ್ತಾರೆ ಎಂದರು.
ಪ್ರತಿ ಮತಕ್ಷೇತ್ರದಲ್ಲೂ 5ಬೂತ್ ರ್ಯಾಂಡಮ್ ಆಗಿ 5ಬೂತ್ ನ್ನು ಚೀಟಿ ಮೂಲಕ ಆರಿಸಿದ್ದೇವೆ. ಅದನ್ನು ಸೀರಿಯಲ್ ಆಗಿ ತೆಗೆದುಕೊಳ್ಳಬೇಕು. ಅದರ ನಂತರ ಮತ್ತೊಂದನ್ನು ತೆಗೆದುಕೊಳ್ಳಬೇಕು. ಎರಡ್ಮೂರು ಗಂಟೆ ಹೆಚ್ಚು ತೆಗೆದುಕೊಳ್ಳಬಹುದು. ಮಧ್ಯಾಹ್ನ 2ಗಂಟೆಯೊಳಗೆ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)