ಮನರಂಜನೆ

ಪಾಕಿಸ್ತಾನ್ ಧ್ವಜದೊಂದಿಗಿರುವ ಫೋಟೋ ಶೇರ್ ಮಾಡಿ ಟ್ರೋಲ್ ಆದ ನಟಿ ರಾಖಿ ಸಾವಂತ್

ದೇಶ(ನವದೆಹಲಿ)ಮೇ.9:- ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮತ್ತೆ ಸುದ್ದಿಯಾಗಿದ್ದಾರೆ. ರಾಖಿ ಸಾವಂತ್  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕೆಲವು ಫೋಟೋಗಳು ಟ್ರೊಲ್ ಆಗುತ್ತಿವೆ.

‘ಧಾರಾ 370’ ಚಿತ್ರದ ಚಿತ್ರೀಕರಣದಲ್ಲಿ ನಟಿ ರಾಖಿ ಸಾವಂತ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪಾಕಿಸ್ತಾನದ ಯುವತಿಯ ಪಾತ್ರವನ್ನು ನಿಭಾಯಿಸುತ್ತಿದ್ದು, ಈ ಚಿತ್ರಕ್ಕಾಗಿಯೇ ರಾಖಿ ಸಾವಂತ್ ಪಾಕ್ ಧ್ವಜದೊಂದಿಗಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಶೇರ್ ಆಗುತ್ತಲೇ ಜಾಲತಾಣಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರಂತೆ. ಫೋಟೋ ಶೇರ್ ಮಾಡುತ್ತ ರಾಖಿ ಸಾವಂತ್ ನಾನು ಭಾರತೀಯಳು. ಐ ಲವ್ ಇಂಡಿಯಾ,  ‘ಧಾರಾ 370’ಯಲ್ಲಿ ಪಾಕಿಸ್ತಾನಿ ಯುವತಿಯ ಪಾತ್ರ ನಿಭಾಯಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಭಾರತದವರಷ್ಟೇ ಅಲ್ಲದೇ ಪಾಕಿಸ್ತಾನ್ ದವರೂ ಕೂಡ ಟ್ರೋಲ್ ಮಾಡುತ್ತಿದ್ದಾರಂತೆ. (ಎಸ್.ಎಚ್)

 

 

 

Leave a Reply

comments

Related Articles

error: