ಮೈಸೂರು

ತಂತ್ರಾಂಶಗಳ ಮೂಲಕ ಪ್ರಕ್ರಿಯೆ ಭ್ರಷ್ಟಾಚಾರಕ್ಕೆ ಕಡಿವಾಣ : ಎಚ್.ಕೆ.ಪಾಟೀಲ್

ಪ್ರತಿಯೊಂದು ಕಾಮಗಾರಿಗಳ ಬಿಲ್, ಪರಿಶೀಲನೆಗಳು ತಂತ್ರಾಂಶದ ಮೂಲಕವೇ ಪ್ರಕ್ರಿಯೆ ಇರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಚಯಾತ್ಮಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮಪಂಚಾಯತ್ ಗಳಲ್ಲಿ ಕೆಲಸ ವಿಳಂಬವಾಗುತ್ತಿದ್ದು, ಎಷ್ಟೇ ಸುಧಾರಣೆ ತರಲು ಸಾಧ್ಯವಾಗಿಲ್ಲ. ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ ಜಾರಿಗೆ ತಂದ ಬಳಿಕ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದರು. ಚೆಕ್‍ಲಿಸ್ಟ್,ಬಿಲ್ ಪಾಸ್,ಪರಿಶೀಲನೆ ಪ್ರತಿಯೊಂದು ತಂತ್ರಾಂಶದ ಮೂಲಕವೇ ಪ್ರಕ್ರಿಯೆ ಇರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದರು.

ಗ್ರಾಮೀಣ ಪ್ರದೇಶದ ದಿಕ್ಕನ್ನು ಬದಲಿಸುವಂತಹ, ತಳಮಟ್ಟದಿಂದ ಮೇಲ್ಮಟ್ಟದವರಿಗೆ ಮಾನವ ಅಭಿವೃದ್ಧಿ ಸೂಚ್ಯಂಕದಂತೆ ಯೋಜನೆಗಳನ್ನು ರೂಪಿಸಲು ನಮ್ಮ ಗ್ರಾಮ-ನಮ್ಮ ಯೋಜನೆಯನ್ನು ತರಲಾಗಿದೆ ಎಂದರು. ಕಾರ್ಯಾಗಾರವನ್ನು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಉದ್ಘಾಟಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾದೇವಿ, ನಿರ್ದೇಶಕ ಡಿ.ಪ್ರಾಣೇಶ್‍ರಾವ್  ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: