ದೇಶಪ್ರಮುಖ ಸುದ್ದಿ

ಭಾರತಕ್ಕೆ ಬರತ್ತೇನೆ, ಆದ್ರೆ ಒನ್ ಕಂಡೀಷನ್!: ಝಾಕೀರ್ ನಾಯ್ಕ್

ನವದೆಹಲಿ (ಮೇ 10): ಭಯೋತ್ಪಾದಕನೆ ಕೃತ್ಯಗಳಿಗೆ ಕುಮ್ಮಕ್ಕು ನೀಡಿ ವಿದೇಶಕ್ಕೆ ಪರಾರಿಯಾಗಿರುವ ಇಸ್ಲಾಮ್ ಧರ್ಮಪ್ರಚಾರಕ ಝಾಕೀರ್ ನಾಯಕ್, ಒಂದು ಷರತ್ತಿನ ಮೇಲೆ ಭಾರತಕ್ಕೆ ಹಿಂದಿರುಗಲು ಒಪ್ಪಿಗೆ ಸೂಚಿಸಿದ್ದಾನೆ.

ನಾನು ಆರೋಪಿ ಎಂದು ಸಾಬೀತಾಗುವವರೆಗೂ ನನ್ನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿದರೆ ಮಾತ್ರ ನಾನು ಭಾರತಕ್ಕೆ ಹಿಂತಿರುಗಲು ಸಿದ್ದ ಎಂದು ಝಾಕೀರ್ ನಾಯಕ್ ಹೇಳಿಕೊಂಡಿದ್ದಾರೆ.ಭಾರತದಿಂದ ಪಲಾಯನ ಮಾಡಿದ ಝಾಕೀರ್ ನಾಯಕ್ 2016ರಿಂದಲೂ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾನೆ. ಮಲೇಷಿಯಾ ಸರ್ಕಾರ ಆತನಿಗೆ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ. ಈತ ಭಾರತದ ಪೌರತ್ವವನ್ನು ಸಹ ಪಡೆದಿದ್ದಾನೆ.

ಸಂದರ್ಶನವೊಂದರಲ್ಲಿ ಧಾರ್ಮಿಕ ಬೋಧಕ ಝಾಕೀರ್ ನಾಯಕ್ ನಾನು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೊಂದಿದ್ದಾನೆ ಅದು ಈಗಿರುವುದಕ್ಕಿಂತ ಮುಂಚಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿತ್ತು. ಎಂದಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ -ಎನ್‍ಐಎ ಬಯಸಿದ್ದಾದರೆ ಮಲೇಷಿಯಾದಲ್ಲೇ ನನ್ನನ್ನು ಪ್ರಶ್ನಿಸಬಹುದು ಎಂದು ನಾಯಕ್ ಪ್ರಶ್ನೆಯೊಂದಕ್ಕೆ ಉತ್ತರವನ್ನು ತಿಳಿಸಿದ್ದಾನೆ. (ಎನ್.ಬಿ)

Leave a Reply

comments

Related Articles

error: