ಮೈಸೂರು

ಆಡಳಿತ ವ್ಯವಸ್ಥೆ ಸರಿಯಾಗಿ ಬಳಕೆಯಾಗಲಿ : ಕೆ.ಆರ್ಕೇಶ್

ಬ್ರಿಟಿಷರಿಂದ ಹುಟ್ಟಿಕೊಂಡ ಆಡಳಿತ ಪದ್ಧತಿ ಜಾರಿಗೊಂಡ ನಂತರ ಸಮಾಜದ ಕಟ್ಟಕಡೆಯ ಮನುಷ್ಯರಿಗೂ ಶಿಕ್ಷಣ ದೊರೆಯುವಂತೆ ಮಾಡಲಾಗಿದೆ.  ಅದರಿಂದ ನಮ್ಮ ಆಡಳಿತ ವ್ಯವಸ್ಥೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ರಾಜ್ಯ ಸರ್ಕಾರದ ವಿಶ್ರಾಂತ ಆರಕ್ಷಕರ ಮಹಾನಿರೀಕ್ಷಕ ಕೆ.ಆರ್ಕೇಶ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ನಡೆದ 2 ದಿನಗಳ ಶೈಕ್ಷಣಿಕ ಆಡಳಿತಾಧಿಕಾರಿಗಳ ಕಾರ್ಯಾಲಯವನ್ನು ಕೆ.ಆರ್ಕೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ರಿಟಿಷರೇ ಮೊದಲು ನಮ್ಮ ದೇಶಕ್ಕೆ ಆಡಳಿತ ವ್ಯವಸ್ಥೆಯನ್ನು ತಂದುಕೊಟ್ಟವರು.  ಆಡಳಿತ ಕೌಶಲ್ಯಗಳು ಹೊರ ಬಂದಂದಿನಿಂದ ಎಲ್ಲವೂ ಬದಲಾಗಿದ್ದು ಕಾನೂನು-ಕಟ್ಟಳೆಗಳು ಹುಟ್ಟಿಕೊಳ್ಳಲು ಪ್ರಾರಂಭವಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ.ಮಿಡತಲ ರಾಣಿ ಹಾಗೂ ಸಂಯೋಜಕ ಡಾ.ಎಲ್.ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: