ಮೈಸೂರು

ವಿಜೃಂಭಣೆಯಿಂದ ನಡೆದ ಶ್ರೀಕಂಠೇಶ್ವರನ ಜಾತ್ರೆ

ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ  ರಥ ಸಪ್ತಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಈ ವೇಳೆ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಹಾಗೂ ಸೂರ್ಯ ಮಂಡಲವನ್ನಿಟ್ಟು ನಗರದ ರಥದ ಬೀದಿಯಲ್ಲಿ ವಿಜೃಂಭಣೆಯಿಂದ ರಥೋತ್ಸವವನ್ನು ನೆರವೇರಿಸಲಾಯಿತು. ನಂತರ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಯಪ್ರಕಾಶ್ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಸಂತ ಮಂಟಪದಲ್ಲಿ ಶ್ರೀಕಂಠೇಶ್ವರನ ಉತ್ಸವ ಮೂರ್ತಿ ಹಾಗೂ ಸೂರ್ಯ ಮಂಡಲವನ್ನಿಟ್ಟು ವಿಶೇಷ ಪೂಜೆ, ಪುರಸ್ಕಾರಗಳನ್ನು ನೆರವೇರಿಸಿ  ಸೂರ್ಯ ದೇವನನ್ನು ಸ್ಮರಿಸುತ್ತ ಹಾಲು ಉಕ್ಕಿಸಿ ಪಾಯಸ ಪ್ರಸಾದ ಮಾಡಿ ಭಕ್ತರಿಗೆ ನೀಡಲಾಯಿತು. ನೂರಾರು ಭಕ್ತರು ತೇರನ್ನ ಎಳೆದು ಪುನೀತರಾದರು.

Leave a Reply

comments

Related Articles

error: