ಕರ್ನಾಟಕಪ್ರಮುಖ ಸುದ್ದಿ

ರಾಜ್ಯದ ಎಲ್ಲ ವಿ.ವಿ.ಗಳಲ್ಲಿ ಪಿಎಚ್‌.ಡಿ, ಎಂ.ಫಿಲ್‌ಗೆ ಒಂದೇ ನಿಯಮಾವಳಿ

ಮಂಗಳೂರು: ಕೇಂದ್ರೀಯ ವಿವಿ ಹೊರತುಪಡಿಸಿ ರಾಜ್ಯದ ಎಲ್ಲ ವಿವಿಗಳಲ್ಲಿ ಪಿಎಚ್‍.ಡಿ, ಎಂ.ಫಿಲ್ ಪದವಿ ಪಡೆಯಲು ಏಕರೂಪ ನಿಯಮಾವಳಿ ಜಾರಿಗೆ ತರಲು ಉದ್ದೇಶಿಸಿಲಾಗಿದ್ದು, ಇದಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರ ನೇತೃತ್ವದ ಐದು ಜನರ ಸಮಿತಿ ನಿಯಮಾವಳಿಗಳನ್ನು ರಚಿಸಿದೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ಕೆ.ಭೈರಪ್ಪ, “ಸಮಿತಿ ರಚಿಸಿದ ನಿಯಮಗಳು ಮಾರ್ಚ್‌ನಲ್ಲಿ ನಡೆಯಲಿರುವ ಉನ್ನತ ಶಿಕ್ಷಣ ಸಮಿತಿಯ ಸಭೆಯಲ್ಲಿ ಮಂಡನೆಯಾಗಲಿವೆ. 17 ರಾಜ್ಯ ವಿಶ್ವವಿದ್ಯಾಲಯಗಳು, ಸ್ವಾಯತ್ತ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಸಮಿತಿ ರಚಿಸಿರುವ ನಿಯಮಗಳು ಅನ್ವಯವಾಗಲಿವೆ” ಎಂದರು.

ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಕುಲಪತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ, ಯೋಜನೆ-ಮೇಲ್ವಿಚಾರಣೆ-ಮೌಲ್ಯಮಾಪನ ಮಂಡಳಿಯ(ಪಿಎಂಇಬಿ) ನಿರ್ದೇಶಕರು ಮತ್ತು ಎಂ.ಎಸ್. ರಾಮಯ್ಯ ಕಾಲೇಜಿನ ಪ್ರಾಂಶುಪಾಲರು ಸಮಿತಿಯಲ್ಲಿದ್ದರು.

Leave a Reply

comments

Related Articles

error: