ಮೈಸೂರು

ತಾಯಿಯ ಅನಾರೋಗ್ಯದಿಂದ ನೊಂದು ಮಗ ಆತ್ಮಹತ್ಯೆ

ತಾಯಿಯ ಅನಾರೋಗ್ಯದಿಂದ ಮಾನಸಿಕವಾಗಿ ನೊಂದ ಮಗ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಕುವೆಂಪುನಗರದ ಎಂ ಬ್ಲಾಕ್‌ನಲ್ಲಿ ನಡೆದಿದೆ.

ಅನೂಪ್ ಕುಮಾರ್(23) ನೇಣಿಗೆ ಶರಣಾದ ಯುವಕ. ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿಗೆ ತಾಯಿಯ ಆನಾರೋಗ್ಯ ಕಾರಣ ಎಂದು ಅಸ್ಪಷ್ಟ ಕನ್ನಡದಲ್ಲಿ ಡೆತ್‌ನೋಟ್ ಬರೆದಿಟ್ಟು ನಾಲ್ಕು ದಿನಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿಯ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈತ ಮೂಲತಃ ಪಿರಿಯಾಪಟ್ಟಣ ತಾಲೂಕಿನ ಮೇಗಳಾಪುರ ಗ್ರಾಮದವ.

ಈತ ಮೈಸೂರಿನ ಕುವೆಂಪು ನಗರದ ನೃಪತುಂಗ ರಸ್ತೆಯಲ್ಲಿರುವ ಎಂ. ಬ್ಲಾಕ್‌ನ ಟ್ರಾವೆಲ್ ಎಜೆನ್ಸಿಯಲ್ಲಿ ಡ್ರೈವರ್ ಆಗಿ ಆರು ತಿಂಗಳಿಂದ ಕೆಲಸ ಮಾಡುತ್ತಿದ್ದ. ಟ್ರಾವೆಲ್‌ನ ಮಾಲೀಕ ಈತನಿಗೆ ಟ್ರಾವೆಲ್ ಕಚೇರಿಯ ಸಂಪೂರ್ಣ ಜಾವಾಬ್ದಾರಿ ನೀಡಿ ೧೫ ದಿನಗಳಿಗೊಮ್ಮೆ ಮಂಡ್ಯದಿಂದ ಬರುತ್ತಿದ್ದರು ಎನ್ನಲಾಗಿದೆ.

ಬಡ ಕುಟುಂಬದ ಅನೂಪ್ ಕುಮಾರ್‌ಗೆ ಒಬ್ಬ ಅಣ್ಣನಿದ್ದು, ತಂದೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದು, ಇದರಿಂದ ಮನನೊಂದಿದ್ದ ಅನೂಪ್ ಕುಮಾರ್ ಆರು ತಿಂಗಳಿನಿಂದ ಮನೆ ಬಿಟ್ಟು ಮೈಸೂರಿನ ಟ್ರಾವೆಲ್ ಏಜೆನ್ಸಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆ ಬೇಸರಗೊಂಡು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ವಾಸನೆ ಬರುತ್ತಿರುವುದನ್ನ ಕಂಡ ಅಕ್ಕಪಕ್ಕದವರು ಪೊಲೀಸರಿಗೆ ಈ ವಿಚಾರ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಕುವೆಂಪುನಗರ ಪೊಲೀಸರು ನೇಣಿಗೆ ಶರಣಾದ ಅನೂಪ್ ಕುಮಾರ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

Leave a Reply

comments

Related Articles

error: