ಮೈಸೂರು

ತಾಂತ್ರಿಕ ದಿನದಲ್ಲಿ ಜನರು ಮೊಬೈಲ್ ಬಳಕೆಗೆ ನೀಡುವ ಸಮಯ ತಂದೆ-ತಾಯಿಯೊಂದಿಗೆ ಸಮಯ ಹಂಚಿಕೊಳ್ಳುತ್ತಿಲ್ಲ : ಶಾಸಕ ಎಲ್.ನಾಗೇಂದ್ರ ಬೇಸರ

ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ "ಆರೋಗ್ಯವಂತ ತಾಯಿ" ಉಚಿತ ಆರೋಗ್ಯ ತಪಾಸಣೆಗೆ ಚಾಲನೆ

ಮೈಸೂರು,ಮೇ.12:- ಅಪೂರ್ವ ಸ್ನೇಹ ಬಳಗ  ಹಾಗೂ  ಲಯನ್ಸ್ ಕ್ಲಬ್ ನಿಸರ್ಗ  ಮತ್ತು ಲಯನ್ಸ್ ಕ್ಲಬ್ ಮಯೂರಿ ಹಾಗೂ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವರ ಸಹಾಯದೊಂದಿಗೆ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ “ಆರೋಗ್ಯವಂತ ತಾಯಿ” ಎಂಬ ಉಚಿತ ಆರೋಗ್ಯ ತಪಾಸಣೆಯಲ್ಲಿ 300 ಕ್ಕೂ ಹೆಚ್ಚು ಮಂದಿಗೆ ರಕ್ತದೊತ್ತಡ ,ಜಿಆರ್ ಬಿಎಸ್, ಇಸಿಜಿ, ಎಕೋ, ಹಾಗೂ ನುರಿತ ವೈದ್ಯರೊಂದಿಗೆ ಸಮಾಲೋಚನೆ  ಶಿಬಿರವನ್ನು ಇಂದು ಜನತಾ ನಗರದಲ್ಲಿರುವ ಶ್ರೀ ಕನಕ ಮಂದಿರ ಏರ್ಪಡಿಸಲಾಗಿತ್ತು.
ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ  ನಾಗೇಂದ್ರ  ಮಾತನಾಡಿ ಭಾರತದ ಹಿಂದೂ ಸಂಸ್ಕೃತಿಗಳಲ್ಲಿ ಪ್ರತಿಯೊಬ್ಬರಿಗೂ ಭೂದೇವಿ, ಭೂಮಿ, ಗೋಮಾತೆ, ನದಿ ಮತ್ತು ಜನುಮ ನೀಡಿದ ತಾಯಿ ಮುಖ್ಯ, ವಿಶ್ವ ತಾಯಂದಿರ ದಿನಾಚರಣೆ ಕೇವಲ ಆಚರಣೆಯಲ್ಲ, ತಾಯಿ ಮಗುವಿಗೆ ಜೀವ  ನೀಡಿದ್ದನ್ನು ಸಂಭ್ರಮಿಸುವ ದಿನ, ನಾವು ಎಷ್ಟೇ ಸಂಪಾದಿಸಿದರೂ ಸಮಾಜದಲ್ಲಿ ಕೀರ್ತಿಗಳಿಸಿದರೂ ತಾಯಿಯ ಮುಂದೆ ನಾವೆಲ್ಲರೂ ಮಕ್ಕಳೇ, ಇಂದಿನ‌ ತಾಂತ್ರಿಕ ದಿನದಲ್ಲಿ ಜನರು ಮೊಬೈಲ್ ಬಳಕೆಗೆ ನೀಡುವ ಸಮಯ ತಂದೆ-ತಾಯಿಯೊಂದಿಗೆ ಸಮಯ ಹಂಚಿಕೊಳ್ಳದಿರುವುದು ಬೇಸರದ ಸಂಗತಿ. ಹಾಗಾಗಿ ಪ್ರತಿದಿನ ತಂದೆ ತಾಯಿಯೊಂದಿಗೆ ನಾವು ಪ್ರೀತಿ ಕಾಳಜಿಯಿಂದ ಮಾತನಾಡಿದರೆ ನೂರಾರು ವರುಷ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೇ   ನೂರಾರು ವರುಷ ಬದುಕಿ ಬಾಳುತ್ತಾರೆ, ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ದುಡಿಯಲು ಪೋಷಕರು ಬೇಕು, ದೇವರ ಮುಂದೆ ಕೈಮುಗಿಯುತ್ತೇವೆ ಆದರೆ ದುಡಿದ ಮೇಲೆ ಮಕ್ಕಳು ಜನುಮ ನೀಡಿದ ದೇವರಂತ ಪೋಷಕರನ್ನು  ವೃದ್ದಾಶ್ರಮಕ್ಕೆ ಸೇರಿಸಿದರೆ ಯಾವ ನ್ಯಾಯ?  ಈ ಕೆಲಸವನ್ನು ಯಾವ ಮಕ್ಕಳು ಮಾಡಬಾರದು.  ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದರು,
ಹಿರಿಯ ಸಮಾಜ ಸೇವಕರಾದ ಡಾ. ಕೆ ರಘುರಾಂ ವಾಜಪೇಯಿ   ಮಾತನಾಡಿ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿ ತ್ಯಜಿಸಬೇಕು, ಆರೋಗ್ಯವಿದ್ದರೆ ಮಾತ್ರ ಸಾಧನೆ ಸಂಪಾದನೆ ಮಾಡಲು ಸಾಧ್ಯ, ವೇದ ಆಯುರ್ವೇದಲ್ಲಿ ಆರೋಗ್ಯ ಸ್ಥಿರತೆ ನಿಯಂತ್ರಣದ ಬಗ್ಗೆ ಮಾಹಿತಿಯಿದೆ, ಯೋಗ,ಧ್ಯಾನ, ಹೋಮ ಹವನ, ವಾಯುವಿಹಾರ  ಸಂಗೀತದಿಂದ ಆರೋಗ್ಯ ವೃದ್ಧಿಸುತ್ತದೆ, ಹಿರಿಯ ನಾಗರೀಕರು ಆರೋಗ್ಯ ತಪಾಸಣೆಯಲ್ಲಿ ಹೆಚ್ಚಾಗಿ ಭಾಗವಹಿಸಿ ಆರೋಗ್ಯ ಸಮಸ್ಯೆಗಳ ಸೂಕ್ಷ್ಮತೆ ಅರಿತರೆ  ನಿವಾರಣೆಯಾಗುತ್ತದೆ. ನಾವೆಲ್ಲರೂ ಆರೋಗ್ಯ ವಿಮೆ ಮಾಡಿಸುತ್ತೇವೆ ಹೊರತು ಪರಿಸರ ಸಂರಕ್ಷಣೆಯ ಕಡೆ ಮುಂದಾಗುವುದಿಲ್ಲ ವಿದ್ಯಾರ್ಥಿಗಳು ಪದವೀಧರರಾಗಬೇಕು ಮತ್ತು ಮರಗಿಡಗಳ ಹಸಿರಿನ ಸಂಪತ್ತು ಹೆಚ್ಚಾದರೆ ಮಾತ್ರ ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು
ಉದ್ಯಮಿ  ಅಪೂರ್ವ ಸುರೇಶ್ ಮಾತನಾಡಿ ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ 1ಲಕ್ಷ ಜನರಲ್ಲಿ  217 ಮಂದಿ ಕ್ಷಯ ರೋಗ ಪೀಡಿತರಾಗಿದ್ದಾರೆ.
ಈ ರೋಗ ನಿಯಂತ್ರಿಸಲು ಕೇಂದ್ರ ಆರೋಗ್ಯ ಇಲಾಖೆಗಳಿಗೆ ಸರಕಾರಿ ಅಲ್ಲದೇ ಖಾಸಗಿ ವೈದ್ಯ ರು ಮತ್ತು ಔಷಧ ವ್ಯಾಪಾರಸ್ಥರುಗಳಿಂದ ಕೂಡ ಟಿ.ಬಿ. ಪಾಸಿಟಿವ್ ಇರುವವರು ಮಾಹಿತಿ ಸಂಗ್ರಹಿಸಿ ಕ್ಷಯರೋಗ ಗುಣಪಡಿಸಲು ಯೋಜನೆ ರೂಪಿಸಿ ಟಿ.ಬಿ. ರೋಗ ಮುಕ್ತ ಮಾಡಲು ಯೋಜನೆ ರೂಪಿಸಬೇಕೆಂದು ಸೂಚಿಸಿದೆ. ನಮ್ಮ ಆರೋಗ್ಯ ಇಲಾಖೆ ಕೂಡ   ಈ ಕುರಿತು ಗಮನ ಹರಿಸಿದೆ. ಆದರೆ ಖಾಸಗಿ ವೈದ್ಯರು  ಮತ್ತು  ಔಷಧ ವ್ಯಾಪಾರಿಗಳು ಸರಕಾರದ ಆದೇಶವನ್ನು ಪಾಲಿಸದೇ ತಾತ್ಸಾರ ತೋರಿಸುತ್ತಿದ್ದಾರೆ. ಟಿ.ಬಿ.ರೋಗ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಎ.ಸಿ.ಎಫ್. (ಆಕ್ಸುವಲ್ ಕೇಸ್ ಫೇಂಡಿಂಗ್ ಕ್ಯಾಂಪೇನ್)   ಅಭಿಯಾನ ಪ್ರಾರಂಭಿಸಿದೆ . ಈಗ ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದ 11 ಜಿಲ್ಲೆಗಳನ್ನು ಗುರುತಿಸಿ ಅಭಿಯಾನ ಪ್ರಾರಂಭಿಸಿದೆ. ಈ ಕಾರ್ಯದಲ್ಲಿ ಏಲ್ಲ ವೈದ್ಯರು ಕೈ ಜೋಡಿಸಬೇಕು. ಇದನ್ನು ಪರಮ ಸೇವೆ ಎಂದು ಭಾವಿಸಬೇಕು . ಈ ಕುರಿತು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಬೇಕು. ಎಂದರು
ಇದೇ ಸಂದರ್ಭದಲ್ಲಿನಗರ ಪಾಲಿಕಾ ಸದಸ್ಯರಾದ ಗೋಪಿ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಕೆ ಶಂಕರ್,   ಲಯನ್ಸ್ ಕ್ಲಬ್ ಆಫ್ ಮೈಸೂರಿನ ಡಾ.ಪ್ರಭಾಮಂಡಲ ,ಲಯನ್ಸ್ ಕ್ಲಬ್ ನಿಸರ್ಗ ಮೈಸೂರು ಅಧ್ಯಕ್ಷರಾದ ಲಯನ್ ಮೂರ್ತಿ ,ಲಯನ್ಸ್ ಕ್ಲಬ್ ಮಯೂರಿ ಅಧ್ಯಕ್ಷರಾದ ಉಮಾ ಪ್ರಸಾದ್ ,ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ  ಡಾ.ಮಲ್ಲಿಕಾರ್ಜುನ್, ಬಿಜೆಪಿ ಯುವ ಮುಖಂಡರಾದ ಜೋಗಿ ಮಂಜು ,ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು ,ಹಾಗೂ ಇನ್ನಿತರರು ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: