ಮೈಸೂರು

ಅಕ್ರಮ ಸಕ್ರಮದಲ್ಲಿನ ನ್ಯೂನತೆ ಬದಲಾಯಿಸಲು ಒತ್ತಾಯ : ಪ್ರತಿಭಟನೆ

ಕೃಷಿಭೂಮಿಯಲ್ಲಿ ನಿರ್ಮಿಸಿರುವ ಮನೆಗಳ ಅಕ್ರಮ ಸಕ್ರಮದಲ್ಲಿರುವ ಕೆಲವು ನ್ಯೂನತೆಗಳನ್ನು  ಬದಲಾಯಿಸುವಂತೆ ಒತ್ತಾಯಿಸಿ ಸರ್ವಜನಾಂಗ ಹಿತರಕ್ಷಣಾ ವೇದಿಕೆ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಅಕ್ರಮ ಸಕ್ರಮ ಮಾಡಿರುವುದು ಸ್ವಾಗತಾರ್ಹವಾದರೂ ಸಕ್ರಮ ಮಾಡುವಾಗ ಗ್ರಾಮೀಣ ಮತ್ತು ನಗರ ಪ್ರದೇಶವೆಂದು ತಾರತಮ್ಯ ಮಾಡಿ ನಿವೇಶನದ ವಿಸ್ತೀರ್ಣವನ್ನು ಮಾನದಂಡವಾಗಿ ತೆಗೆದುಕೊಂಡು ಮೈಸೂರು ನಗರ ಪ್ರದೇಶಗಳಲ್ಲಿ ಯಾವುದೇ ನಿವೇಶನವನ್ನು ಸಕ್ರಮ ಮಾಡದಿರುವುದು ಖಂಡನೀಯ ಎಂದರು.

ಈಗಿನ ಮಾನದಂಡದ ಪ್ರಕಾರ ಮೈಸೂರು ನಗರ ವ್ಯಾಪ್ತಿಯಲ್ಲಿ 95ಭಾಗದ ಅಕ್ರಮ ಮನೆಗಳು ಸಕ್ರಮವಾಗುವುದಿಲ್ಲ. ಆದ್ದರಿಂದ ಈ ನಿಯಮವನ್ನು 20*30, 30*40ಗೆ ಬದಲಾಯಿಸಬೇಕು. ಗ್ರಾಮೀಣ ಶುಲ್ಕದ ಮಾದರಿ ಪ್ರಮಾಣವನ್ನು 40*60ಕ್ಕೆ ಏರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವೇಣುಗೋಪಾಲ, ಅಕ್ರಂಪಾಷಾ, ಮನೋಹರ್, ಎಲ್.ಮಹದೇವಪ್ಪ, ಗುರುಮೂರ್ತಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: