ಕರ್ನಾಟಕಪ್ರಮುಖ ಸುದ್ದಿ

ಎಸ್‍ಎಂ ಕೃಷ್ಣ ಬಿಜೆಪಿ ಸೇರುವುದು ಖಚಿತ : ಯಡಿಯೂರಪ್ಪ ಪುನರುಚ್ಚಾರ

ಕಲಬುರಗಿ: ಮಾಜಿ ಮುಖ್ಯಮಂತ್ರಿ ಎಸ್‍.ಎಸ್. ಕೃಷ್ಣ ಅವರು ಬಿಜೆಪಿ ಸೇರುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.

ಬಿಜೆಪಿ ಸೇರುವ ಬಗ್ಗೆ ಕೃಷ್ಣ ಅವರ ಜೊತೆ ಎಲ್ಲ ಹಂತದ ಮಾತುಕತೆ ಮುಗಿದಿವೆ. ಅವರು ಬಿಜೆಪಿ ಸೇರಲು ಯಾವುದೆ ಬೇಡಿಕೆ ಮುಂದಿಟ್ಟಿಲ್ಲ. ಹಿರಿಯ ರಾಜಕಾರಣಿಯಾಗಿರುವ ಎಸ್‍.ಎಂ.ಕೃಷ್ಣ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರಲಿದೆ ಎಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಮುಂದುವರಿದ ರಾಜೀನಾಮೆ ಪರ್ವ:

ಹಿರಿಯ ಮುಖಂಡ ಕೃಷ್ಣ ಅವರು ಕಾಂಗ್ರೆಸ್ ತೊರೆದಿರುವುದು ಪಕ್ಷದಲ್ಲಿದ್ದ ಅವರ ಬೆಂಬಲಿಗರಲ್ಲಿ ಬೇಸರ ತರಿಸಿದೆ. ಈಗಾಗಲೇ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಜಿಲ್ಲಾ ತಾಲೂಕು ಮಟ್ಟದ ಹಲವಾರು ಮುಖಂಡರು ರಾಜೀನಾಮೆ ನೀಡಿದ್ದಾರೆ.

ಇದೀಗ ಚಾಮರಾಜನಗರ ಬ್ಲಾಕ್‍ ಕಾಂಗ್ರೆಸ್‍ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೈಯದ್‍ ರಫಿ ಅವರು ರಾಜೀನಾಮೆ ನೀಡಿದ್ದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನಿಡಿದ್ದಾರೆ. ತಮ್ಮ ನಾಯಕ ಕೃಷ್ಣ ಅವರು ಪಕ್ಷ ಬಿಟ್ಟಿದ್ದಕ್ಕೆ ಬೇಸರಗೊಂಡು ರಾಜೀನಾಮೆ ನೀಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಹೇಳಿದ್ದಾರೆ.

ಕೃಷ್ಣ ನಿರ್ಗಮನದಿಂದ ಹಳೇ ಮೈಸೂರು ಭಾಗದಲ್ಲಿ ಹಲವಾರು ಮುಖಂಡರು ಕಾಂಗ್ರೆಸ್‍ ಪಕ್ಷ ಬಿಡುತ್ತಿದ್ದು, ಪಕ್ಷದ ಮೇಲೆ ನಕರಾತ್ಮಕ ಬೀರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕೃಷ್ಣ ಬೆಂಬಲಿಗರಿರುವುದು ಕಾಂಗ್ರೆಸ್‍ ನಾಯಕರಿಗೆ ತಲೆನೋವು ತಂದಿದೆ.

Leave a Reply

comments

Related Articles

error: