ಕರ್ನಾಟಕಪ್ರಮುಖ ಸುದ್ದಿ

ಲಕ್ಷ್ಮೀ ಹೆಬ್ಬಾಳ್ಕರ್​ ಕರ್ನಾಟಕದ ಮೊದಲ ಮಹಿಳಾ ಸಿಎಂ ಆಗ್ತಾರೆ! ಕೂಡಲಸಂಗಮ ಶ್ರೀ ಭವಿಷ್ಯ

ಬೆಳಗಾವಿ (ಮೇ 13): ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗ್ತಾರೆ ಎಂದು ಕೂಡಲಸಂಗಮ ಶ್ರೀ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ನಡೆದ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಲ್ಗೊಂಡು ಶ್ರೀಗಳು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹೆಬ್ಬಾಳ್ಕರ್​ ಕ್ವಾರ್ಟರ್​​ ಫೈನಲ್ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲೂ ಅವರನ್ನು ಗೆಲ್ಲಿಸಬೇಕು. ಈ ಮೂಲಕ ಅವರು 2028ಕ್ಕೆ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲವೆಂದು ಸ್ವಾಮೀಜಿ ಭವಿಷ್ಯ ನುಡಿದರು.

ಇನ್ನೊಂದು ಚುನಾವಣೆ ಸೋತಿದ್ದರೆ ಬದುಕುತ್ತಿರಲಿಲ್ಲ:

ಇದೇ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎರಡು ಬಾರಿ ಚುನಾವಣೆಗಳಲ್ಲಿ ಸೋತು ಕಂಗೆಟ್ಟು ಹೋಗಿದ್ದೆ. ಇನ್ನೊಂದು ಚುನಾವಣೆಯಲ್ಲಿ ಸೋಲುವ ಶಕ್ತಿ ನನ್ನಲ್ಲಿ ಇರಲಿಲ್ಲ. ನಾನು ಹುಟ್ಟಿನಿಂದಲೇ ಧೈರ್ಯವಂತೆಯಾದರೂ ಬದುಕುವ ಶಕ್ತಿ ಇರಲಿಲ್ಲ. ಇನ್ನೊಮ್ಮೆ ಸೋತರೆ ನಾನೇನು ಮಾಡಿಕೊಳ್ಳುವೆ ಎಂದು ತಾಯಿಗೆ ಹೇಳಿದ್ದೆ. ಆದರೆ ಗ್ರಾಮೀಣ ಕ್ಷೇತ್ರದ ಜನತೆ ನನ್ನ ಕೈಬಿಡಲಿಲ್ಲ. ನನ್ನನ್ನು ಗೆಲ್ಲಿಸಿ ನನಗೆ ಮರುಜನ್ಮ ನೀಡಿದ್ದಾರೆ. ಸ್ವಾಭಿಮಾನದ ಮರುಜನ್ಮ ನೀಡಿದ ಅವರ ಉಪಕಾರ ಮರೆಯಲಾರೆ ಎಂದು ಅವರು ಹೇಳಿದರು. (ಎನ್.ಬಿ)

Leave a Reply

comments

Related Articles

error: