ಮೈಸೂರು

ಫೆ.6-7 : ಶ್ರೀ ರಾಮಾನುಜ ಸಹಸ್ರಮಾನೋತ್ಸವ-ಸಂಗೀತ ಕಾರ್ಯಕ್ರಮ

ಶ್ರೀ ರಾಮಾನುಜ ಸೇವಾ ಪ್ರತಿಷ್ಠಾನಂ, ಶ್ರೀ ರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್ ಮತ್ತು ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಫೆ.6 ಮತ್ತು 7 ರಂದು ಸಂಜೆ 5 ಗಂಟೆಗೆ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಶ್ರೀ ರಾಮಾನುಜ ಸಹಸ್ರಮಾನೋತ್ಸವ ಹಾಗೂ ಸಂಗೀತ-ನೃತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ‍್ಳಲಾಗಿದೆ ಎಂದು ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯ ಕಾರ್ಯದರ್ಶಿ ಎಸ್.ರವಿಕುಮಾರ್ ತಿಳಿಸಿದರು.

ಶನಿವಾರ  ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.6 ರಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಕೆ.ನರಹರಿ ಆಗಮಿಸಲಿದ್ದಾರೆ. ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಅಧ‍್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ವಿದ್ವಾನ್ ಶಂಕರ್ ಶಾನ್ ಭಾಗ್, ವಿದೂಷಿ ವಾಣಿ ಹರ್ಡೀಕರ್ ಮತ್ತು ವಸುಧ ಜಿ ಗಿರಿಧರ್ ಅವರು ಭಕ್ತಿ ಹರಿನಾಮ ಸಂಕೀರ್ತನೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಫೆ.7 ರಂದು ‘ಬೀದಿ ನಾಚಿಯಾರ್’(ವರನಂದಿ) ಭಕ್ತಿ ರೂಪಕ ಸಂಗೀತ ಕಾರ್ಯಕ್ರಮವನ್ನು ಬೆಂಗಳೂರಿನ ಡಾ.ಮಿಥುನ್ ಶ್ಯಾಂ ಮತ್ತು ತಂಡದವರು ಪ್ರಸ್ತುತಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿಯ ಪದಾಧಿಕಾರಿಗಳಾದ ರಾಜಗೋಪಾಲ್, ಯೋಗಾನರಸಿಂಹ, ರಾಮಾನುಜ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: