
ಮೈಸೂರು
ಜಿಲ್ಲೆಗೆ 4ನೇ ಸ್ಥಾನ ಗಳಿಸಿದ ಹೆಚ್.ಕೆ.ಮೇಘನ್
ಮೈಸೂರು,ಮೇ.13 : ಕುವೆಂಪುನಗರದ ವಿವಿಎಸ್ ಬಿ.ಎಂ.ಶ್ರೀ ಶಿಕ್ಷಣ ಸಂಸ್ಥೆಯ ಹೆಚ್.ಕೆ.ಮೇಘನ್ ಪ್ರಸಕ್ತ ಸಾಲಿನ ಸಿಬಿಎಸ್.ಇ 10ನೇ ತರಗತಿಯಲ್ಲಿ ಶೇ.98.4 ಅಂಕ ಗಳಿಸುವ ಮೂಲಕ ಜಿಲ್ಲೆಗೆ 4ನೇ ಸ್ಥಾನವನ್ನು ಗಳಿಸಿದ್ದಾಳೆ.
ಈಕೆ 500 ಅಂಕಗಳಿಗೆ 492 ಪಡೆದಿದ್ದು ಆ ಮೂಲಕ ಅತ್ಯುತ್ತಮ ಸಾಧನೆ ಮಾಡಿರುವಳು. ಅದರಂತೆ, ಸಾಯಿ ಚರಣ್, ವಿ.ಸಿ.ಧನ್ಯ, ಎಸ್.ವಿ.ಪವನ್, ಮಾನ್ಯ ಕೃಷ್ಣ, ಯು.ಅನನ್ಯ, ಬಿಂಬಿಕ ಗಣಪತಿ ಪೊಂಜಂಡ, ಸಿ.ಬಿ.ಚಿನ್ಮಯಿ, ಎಂ.ಪಿ.ಸೃಷ್ಟಿ, ಎಸ್.ಅಪೂರ್ವ, ವಿ.ಶ್ರೀವತ್ಸ, ಎಂ.ವಿ.ಪ್ರಜ್ಞಾ, ಪೂರ್ವಿಕ ಬೆನ್ನೂರು, ವೈಶಾಲಿ ಶೆಣಾಯ್, ಹಿಮಾಂಶು ಉಡುಪ ಹಾಗೂ ಜಿ.ಪ್ರೀತಮ ಇವರುಗಳು ಶೇ.85ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರು, ಶಿಕ್ಷಕ ವರ್ಗವು ಶುಭ ಹಾರೈಸಿದ್ದಾರೆ. (ಕೆ.ಎಂ.ಆರ್)