ಮೈಸೂರು

ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಿದೆ : ಎಸ್.ತಿಪ್ಪೇಸ್ವಾಮಿ

ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಿದ್ದು, ಛಾಯಾಚಿತ್ರಗಳು ಮನುಷ್ಯನ ವ್ಯಕ್ತಿತ್ವವನ್ನು ತೆರೆದಿಡಲಿದೆ ಎಂದು ಹಿರಿಯ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ತಿಳಿಸಿದರು.

ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಇಕೋಬ್ರೇನ್ ವತಿಯಿಂದ ಆಯೋಜಿಸಲಾದ ಓಪನ್ ಷಟರ್ ಛಾಯಾಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು. ಮೈಸೂರು ಛಾಯಾಚಿತ್ರಗಳನ್ನು ಸೆರೆಹಿಡಿಯಲು ಹೇಳಿ ಮಾಡಿಸಿದಂತಹ ತಾಣ. ಇಲ್ಲಿ ತೆಗೆದಿರುವಂಥಹ ಎಷ್ಟೋ ಛಾಯಾಚಿತ್ರಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ. ಈಗ ಎಲ್ಲರೂ ಛಾಯಾಗ್ರಾಹಕರೇ ಆಗಿದ್ದಾರೆ. ಎಲ್ಲರಲ್ಲೂ ತಾನು ಚೆನ್ನಾಗಿ ಗಾಯಾಗ್ರಹಣ ಸೆರೆಹಿಡಿದಿದ್ದೇನೆ ಎಂಬ ಭಾವನೆ ಇರುತ್ತದೆ. ಅದರಲ್ಲಿಯೂ ನಿಜವಾದ ಪ್ರತಿಭೆಯನ್ನು ಹುಡುಕುವ ಕೆಲಸವಾಗಬೇಕು ಎಂದರು.

ಅಬಿದ್ ಅಲಿ.ಎ.ಕೆ, ಭರತ್ ಕುಮಾರ್, ಭಗವತಿ.ಎಂ.ಆರ್, ದೇವದತ್ತ ಮಹಾರಾಣ, ಹೇಮಾ ಸುಬ್ರಮಣಿ, ಪ್ರವೀಣ್ ಅಯ್ಯರ್.ಕೆ.ವಿ, ರಘುಪ್ರಸಾದ್ ಅವರ ಛಾಯಾಚಿತ್ರವನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ, ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ಉಪಸ್ಥಿತರಿದ್ದರು.

Leave a Reply

comments

Related Articles

error: