ಕ್ರೀಡೆ

ರಕ್ತಸಿಕ್ತ ಮೊಣಕಾಲಿನ ಗಾಯದ ನಡುವೆಯೂ 80ರನ್ ಗಳ ಅಮೋಘ ಪ್ರದರ್ಶನ ನೀಡಿದ ಶೇನ್ ವಾಟ್ಸನ್ !

ಹೈದರಾಬಾದ್,ಮೇ 14- ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಆದರೆ ಚೆನ್ನೈ ತಂಡದ ಗೆಲುವಿಗಾಗಿ ಶೇನ್ ವಾಟ್ಸನ್ ಪಟ್ಟ ಶ್ರಮ ವ್ಯರ್ಥವಾಗಿದೆ.

ಫೈನಲ್ ಪಂದ್ಯದಲ್ಲಿ ಶೇನ್ ವಾಟ್ಸನ್ ರಕ್ತಸಿಕ್ತ ಮೊಣಕಾಲಿನಿಂದ ಅತೀವ ನೋವುಪಡುತ್ತಿದ್ದರೂ ಬ್ಯಾಟಿಂಗ್ ಮಾಡಿದ್ದಾರೆ. 80 ರನ್ಗಳ ಅಮೋಘ ಇನ್ನಿಂಗ್ಸ್ ಸಹ ಕಟ್ಟಿದ್ದಾರೆ. ಆದರೂ ಚೆನ್ನೈ ತಂಡ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ.

ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾಂಗ್ರಾಂ ಪುಟದಲ್ಲಿ ವಾಟ್ಸನ್ ಚಿತ್ರವನ್ನು ಪೋಸ್ಟ್ ಮಾಡಿದ್ದು, ನಿಮಗೆ ವಾಟ್ಸನ್ ರಕ್ತಸಿಕ್ತ ಮೊಣಕಾಲು ಕಾಣಿಸುತ್ತಿದೆಯೇ? ಪಂದ್ಯದ ಬಳಿಕ ಆರು ಸ್ಟಿಚ್ಗಳನ್ನು ಹಾಕಲಾಗಿದೆ. ಡೈವಿಂಗ್ ಮಾಡುವಾಗ ವಾಟ್ಸನ್ ಗಾಯಗೊಂಡಿದ್ದರು. ಆದರೆ ಯಾರಿಗೂ ಹೇಳದೆಯೇ ಬ್ಯಾಟಿಂಗ್ ಮುಂದುವರಿಸಿದ್ದರು. ಅವರೇ ನಮ್ಮ ವಾಟ್ಸನ್ ಎಂದು ಭಜ್ಜಿ ವಿವರಿಸಿದ್ದಾರೆ. ಇಲ್ಲಿ ವಾಟ್ಸನ್ ತೋರಿರುವ ಅರ್ಪಣಾ ಮನೋಭಾವಕ್ಕೆ ಹ್ಯಾಟ್ಸಫ್ ಹೇಳಲೇಬೇಕು.

ಕಳೆದ ವರ್ಷ ಹೈದರಾಬಾದ್ ವಿರುದ್ಧ ಫೈನಲ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ವಾಟ್ಸನ್ ಚೆನ್ನೈಗೆ ಟ್ರೋಫಿ ಗೆಲ್ಲಲು ನೆರವಾಗಿದ್ದರು. ಆದರೆ ಬಾರಿ ಮುಂಬೈ ವಿರುದ್ಧ ಅಂತಿಮ ಓವರ್ನಲ್ಲಿ ಗಾಯದಿಂದಾಗಿ ರನೌಟ್ ಬಲೆಗೆ ಸಿಲುಕಿದ್ದರು. ಇದರಿಂದಾಗಿ ಕೇವಲ ಒಂದು ರನ್ ಅಂತರದಿಂದ ಚಾಂಪಿಯನ್ ಪಟ್ಟ ಕಳೆದುಕೊಳ್ಳುವಂತಾಯಿತು. (ಎಂ.ಎನ್)

Leave a Reply

comments

Related Articles

error: