ಮೈಸೂರು

ಶಾಸಕರ ಬೆಂಬಲಿಗರಿಂದ ದಾಂದಲೆ : ಎಫ್ಐಆರ್ ದಾಖಲು

ಶಾಸಕರ ಬೆಂಬಲಿಗರು  ಗೃಹೋಪಯೋಗಿ ಅಂಗಡಿಯೊಂದಕ್ಕೆ  ನುಗ್ಗಿ ದಾಂದಲೆ ನಡೆಸಿದ್ದು, ಶಾಸಕರ ವಿರುದ್ಧ ಎಫ್ಐಆರ್ ದಾಖಲಾದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಹುಣಸೂರು ಪಟ್ಟಣದ ಹರೀಶ್ ಎಂಟರ್ ಪ್ರೈಸಸ್ ಗೆ ನುಗ್ಗಿ ಶಾಸಕರ ಬೆಂಬಲಿಗರು ದಾಂದಲೆ ನಡೆಸಿದ್ದರು. ಶಾಸಕ ಎಚ್.ಪಿ.ಮಂಜುನಾಥ್, ಬೆಂಬಲಿಗರೆಂದು ಗುರುತಿಸಿಕೊಂಡಿರುವ  ಶಿವಕುಮಾರ್, ರಮೇಶ್, ರಘು, ಕುಮಾರ್ ಮತ್ತು ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ, ಅಂಗಡಿಗೆ ಏಕಾಏಕಿ ನುಗ್ಗಿ ದಾಂದಲೆ ನಡೆಸಿದ್ದಲ್ಲದೇ, ಪತ್ನಿ, ನಾಲ್ವರು ಹೆಣ್ಣು ಮಕ್ಕಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

comments

Related Articles

error: