ಮೈಸೂರು

ಫೆ.6 ರಂದು ಬ್ರಹ್ಮ ರಥೋತ್ಸವ

‍ಫೆ.6 ರಂದು ಸಂಜೆ 4.30 ಕ್ಕೆ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನ ಮತ್ತು ಕಾಳಮ್ಮನ ಗುಡಿ ಮುಂಭಾಗದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಹೇಳಿದರು.

ಶನಿವಾರ ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಬ್ರಹ್ಮ ರಥೋತ್ಸವದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ, ಎಲ್ಲಾ ಸಮುದಾಯದ ಬಂಧುಗಳು ಸೇರಿ ರಾಜ ಬೀದಿಗಳಲ್ಲಿ , ಕಾಳಮ್ಮನ ಗುಡಿ ಬೀದಿ, ಇರ್ವಿನ್ ರಸ್ತೆ, ಬೆಂಕಿ ನವಾಬ ರಸ್ತೆ, ಕಬೀರ್ ರಸ್ತೆ ಮುಖಾಂತರ ಶ‍್ರೀ ಚೌಡೇಶ್ವರಿ ದೇವಸ್ಥಾನವನ್ನು ಬಂದು ಸೇರುತ್ತದೆ. ಈ ಸಂದರ್ಭದಲ್ಲಿ ಕುಲಬಾಂಧವರು ಕತ್ತಿ ಸೇವೆ, ಬಾಯಿ ಬೀಗ, ಕುಮಾರರು ವೀರಭದ್ರ ಮತ್ತು ಮಹಿಳೆಯರು ತಂಬಿಟ್ಟಿನ ಆರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿರುತ್ತಾರೆ. ಸಾರ್ವಜನಿಕರಿಗೆ ರಾಜ ಬೀದಿಗಳಲ್ಲಿ ಪಾನಕ, ಮಜ್ಜಿಗೆ,ಸಿಹಿ ಮತ್ತು ಹಣ‍್ಣುಗಳನ್ನು ಹಂಚಲಾಗುತ್ತದೆ ಎಂದು ಹೇಳಿದರು.

ಈ ಬ್ರಹ್ಮ ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ವಾಸು, ಪಾಲಿಕೆ ಸದಸ್ಯರಾದ ರಾಜಲಕ್ಷ್ಮಿ ರಾಜಣ್ಣ, ರಮೇಶ್, ಶಿವಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಿನೇಶ್, ಚಂದ್ರಶೇಖರ್, ಬಿ.ಎಸ್.ರವಿನಾಥ್, ಎಸ್.ದಿವಾಕರ್ ಹಾಜರಿದ್ದರು.

Leave a Reply

comments

Related Articles

error: