Uncategorized

ಸಿಯೆಟ್ 2019: ವಿರಾಟ್ ಕೊಹ್ಲಿ, ಸ್ಮೃತಿ ಮಂದನಾಗೆ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ

ನವದೆಹಲಿ,ಮೇ 14-ಈ ಸಾಲಿನ (2019) ಸಿಯೆಟ್ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪುರಸ್ಕೃತರಾದರೆ, ಮಹಿಳಾ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದನಾ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ಬ್ಯಾಟ್ಸಮನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾಗೆ ಬೆಸ್ಟ್ ಬೌಲರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯರೇ ಸಿಂಹಪಾಲು ಪಡೆದಿದ್ದು, ಒಟ್ಟು ಒಂಬತ್ತು ಪ್ರಶಸ್ತಿಯಲ್ಲಿ ಏಳು ಭಾರತೀಯರ ಪಾಲಾಗಿದೆ. ಅತ್ಯುತ್ತಮ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಚೇತೇಶ್ವರ ಪೂಜಾರ ಪಾಲಾದರೆ, ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಉಪನಾಯಕ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ವರ್ಷದ ಅತ್ಯದ್ಭುತ ಪ್ರದರ್ಶನ ಪ್ರಶಸ್ತಿ ಪಡೆದರೆ, ಆಸ್ಟ್ರೇಲಿಯಾ ದ ಆರೋನ್ ಫಿಂಚ್ ವರ್ಷದ ಟಿ-ಟ್ವೆಂಟಿ ಆಟಗಾರ, ಅಫಘಾನಿಸ್ತಾನದ ರಶೀದ್ ಖಾನ್ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಬೌಲರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1983ರ ವಿಶ್ವಕಪ್ ತಂಡದಲ್ಲಿದ್ದ ಭಾರತೀಯ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ಅವರನ್ನು ಜೀವಮಾನ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗಿದೆ. (ಎಂ.ಎನ್)

 

 

Leave a Reply

comments

Related Articles

error: