Uncategorized

ಮೇ.19ರಂದು ಮುಕ್ತ ಚದುರಂಗ ಪಂದ್ಯಾವಳಿ : ಆಹ್ವಾನ

ಮೈಸೂರು,ಮೇ.14 : ಜಿಲ್ಲಾ ಚದುರಂಗ ಸಂಸ್ಥೆ ವತಿಯಿಂದ 19 ವರ್ಷದೊಳಗಿನವರ ಮುಕ್ತ ಚದುರಂಗ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಆಸಕ್ತರು ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ಮೇ.19 ರ ಭಾನುವಾರದಂದು ಬೆಳಗ್ಗೆ 9 ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಸ್ಥಳದಲ್ಲಿಯೇ ಪ್ರವೇಶ ಪಡೆಯಬಹುದಾಗಿದೆ, 7 ವರ್ಷದೊಳಗೆ, 10, 14 ಹಾಗೂ 19 ವರ್ಷದೊಳಗೆ ಎಂಬ  ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ, ಚೆಸ್ ಸೆಟ್ ಅನ್ನು ಕ್ರೀಡಾಪಟುಗಳೇ ತರಬೇಕು ಎಂದು ತಿಳಿಸಲಾಗಿದೆ. ವಿವರಗಳಿಗೆ ಮೊ.ಸಂ. 8618101368, 9448273082 ಅನ್ನು ಸಂಪರ್ಕಿಸಬಹುದೆಂದು ಸಂಸ್ಥೆ ಕಾರ್ಯದರ್ಶಿ ಕೆ.ಆರ್.ಶಿವರಾಮೆಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: