ಮೈಸೂರು

ರೈತರ ಮಕ್ಕಳಿಗೆ ಉದ್ಯೋಗ ನೀಡದೆ ವಂಚನೆ : ರೈತರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ

ಮೈಸೂರು,ಮೇ.15:- ರೈತರ ಮಕ್ಕಳಿಗೆ ಉದ್ಯೋಗ ನೀಡದೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ  ಏಷಿಯನ್ ಪೇಯಿಂಟ್ಸ್ ಕಾರ್ಖಾನೆ ವಿರುದ್ಧ  ರೈತರು ಇಂದಿನಿಂದ  ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿರುವ ಕಾರ್ಖಾನೆ ಎದುರು ಧರಣಿ ನಡೆಸುತ್ತಿರುವ ರೈತರು ಭೂಮಿ ಮಾರಿದ ರೈತರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಏಷಿಯನ್ ಪೇಯಿಂಟ್ಸ್ ಕಾರ್ಖಾನೆ ಭೂಮಿ ಖರೀದಿಸಿತ್ತು. ಕಾರ್ಖಾನೆ ಆರಂಭಿಸಲು 175 ಎಕರೆ ಖರೀದಿ ಮಾಡಲಾಗಿತ್ತು. ಕಾರ್ಖಾನೆ ಆರಂಭವಾದ ಬಳಿಕ ಉದ್ಯೋಗ ನೀಡಲು ನಿರಾಕರಿಸಿದೆ. ರೈತರ ಮಕ್ಕಳು ಹಾಗೂ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ನೀಡದೆ ವಂಚಿಸಿದ ಎಂದು  ಆರೋಪಿಸಿದರು. ಜಿಲ್ಲಾಡಳಿತ ಉದ್ಯೋಗ ನೀಡುವಂತೆ ಸೂಚನೆ ನೀಡಿತ್ತು. ಜಿಲ್ಲಾಡಳಿತದ ಸೂಚನೆಗೂ ಕಾರ್ಖಾನೆ ಕಿಮ್ಮತ್ತು ನೀಡುತ್ತಿಲ್ಲ. ಕಾರ್ಖಾನೆಯ ಧೋರಣೆ ಖಂಡಿಸಿ   ರೈತ ಸಂಘದ ವತಿಯಿಂದ ನಾವೆಲ್ಲ ರೈತರು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು. ತಡರಾತ್ರಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಲಾರಿ ಹರಿಸಲು ಯತ್ನಿಸಲಾಗಿದೆ. ರೈತ ಮುಖಂಡರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿ ಚಾಲಕ ಅಯ್ಯಪ್ಪಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಯಂ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದುದರಿಂದ ವ್ಯವಸ್ಥಿತ ರೀತಿಯಲ್ಲಿ ಕೊಲೆಗೆ ಪ್ರಯತ್ನ ಮಾಡಲಾಗಿದೆ. ಇದು ರೈತರನ್ನು ಹೆದರಿಸುವ ಪ್ರಯತ್ನ ಎಂದು ರೈತ ಸಂಘ  ಗಂಭೀರ ಅರೋಪ ಮಾಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: