ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶ ಪ್ರಾರಂಭ

ಮಂಡ್ಯ (ಏ.15): 2019-20ನೇ ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಮೇ 06  ಪ್ರವೇಶಾತಿ ಆರಂಭವಾಗಿದೆ.
ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಾದ ಬಿ.ಎ/ಬಿ.ಕಾಂ, ಬಿ.ಎಲ್.ಐ,ಎಸ್ಸಿ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಪಿಜಿ ಡಿಪ್ಲೋಮಾ ಪ್ರೋಗ್ರಾಮ್, ಸರ್ಟಿಫಿಕೇಟ್ ಫ್ರೋಗ್ರಾಮ್ಸ್‍ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. (ಎಂ.ಬಿ.ಎಗೆ ಸಿ.ಇ.ಟಿ ಮೂಖಾಂತರ ಪ್ರವೇಶಾತಿ ಇರುತ್ತದೆ.)

ಪ್ರಥಮ ವರ್ಷದ ಈ ಕೋರ್ಸ್‍ಗಳ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಜುಲೈ.25 ಹಾಗೂ 200ರೂ ದಂಡ ಶುಲ್ಕದೊಂದಿಗೆ ಆಗಸ್ಟ್. 21 ಮತ್ತು 400 ದಂಡ ಶುಲ್ಕದೊಂದಿಗೆ ಆಗಸ್ಟ್.31 ಕಡೆಯ ದಿನಾಂಕವಾಗಿರುತ್ತದೆ.

ಕರಾಮುವಿಯ ಅಧಿಕೃತ ವೆಬ್ಸೈಟ್ www.ksoumysore.karnataka.gov.in ನಲ್ಲಿ ಪ್ರವೇಶಾತಿ ಶುಲ್ಕ, ವಿದ್ಯಾರ್ಹತೆ ಹಾಗೂ ವಿವರಣಾ ಪುಸ್ತಕ ಮತ್ತು ಆನ್‍ಲೈನ್‍ನಲ್ಲಿ ಪ್ರವೇಶಾತಿ ಅರ್ಜಿ ಮಾಡಿದ ನಂತರ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದಾಗಿರುತ್ತದೆ ಹಾಗೂ ಬಿಪಿಎಲ್ ಕಾರ್ಡ್‍ನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.25ರಷ್ಟು ವಿನಾಯಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9964495936, 9916894579, 6360475208, 9341555676, 8495989462, 8095557722 ಹಾಗೂ 8546824143  ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ. (ಎನ್.ಬಿ)

Leave a Reply

comments

Related Articles

error: