ಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸದಿರುವ ಮಹಾನಗರ ಪಾಲಿಕೆಯ ವಿರುದ್ಧ ಪ್ರತಿಭಟನೆ

ಮೈಸೂರು,ಮೇ.15:- ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸದಿರುವ ಮಹಾನಗರ ಪಾಲಿಕೆಯ ವಿರುದ್ಧ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸಾಮೂಹಿಕ ಪ್ರತಿಭಟನೆ ನಡೆಯಿತು.

ಇಂದು ಮಹಾನಗರ ಪಾಲಿಕೆಯ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಖಾಲಿ ನಿವೇಶನಗಳು  ಗಿಡಗಂಟಿ, ತ್ಯಾಜ್ಯಗಳು ಹಾಗೂ ವಿಷಜಂತುಗಳಿಗೆ ಆಶ್ರಯ ತಾಣವಾಗಿದ್ದು, ಇವುಗಳನ್ನು ಸ್ವಚ್ಛ ಮಾಡಲು ಖಾಲಿ ನಿವೇಶನಗಳ ಮೇಲೆ ಪ್ರತಿ ಸ್ಕ್ವೇ ಫೀಟ್ ಗೆ 2ರೂ.ನಂತೆ ಸ್ವಚ್ಛತೆಯ ಸೆಸ್ ನ್ನು ಹಾಕಿ ವರ್ಷದಲ್ಲಿ 3ಬಾರಿ ಸ್ವಚ್ಛತೆ ಕೈಗೊಳ್ಳಬೇಕೆಂದು ಹಾಗೂ ಪ್ರತ್ಯೇಕವಾಗಿ ಎಸ್ಕ್ರೋವ್ ಖಾತೆ ಆರಂಭಿಸಿ ಗ್ಲೋಬಲ್ ಟೆಂಡರ್ ಕರೆದು ಖಾಲಿ ನಿವೇಶನಗಳನ್ನು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಸ ವಿಲೇವಾರಿ ಸಮಸ್ಯೆಯಿಂದ ವಾಯು ಮಾಲಿನ್ಯ ಹಾಗೂ ಜಲಮಾಲಿನ್ಯ ಸಮಸ್ಯೆಗಳು ಉಂಟಾಗುತ್ತಿವೆ. ಮೈಸೂರಿನ ಸೂಯೇಜ್ ಫಾರಂಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ನಿರಂತರ ಹೋರಾಟಗಳು ನಡೆದಿದ್ದು, ರಾಜ್ಯ ಮತ್ತು ಕೇಂದ್ರದ ಪರಿಸರ ಮಾಲಿನ್ಯ ಮಂಡಳಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದಿಂದಲೂ ಇಲ್ಲಿನ ಮಸ್ಯೆಗಳ ಪರಿಹಾರಕ್ಕೆ ಆದೇಶವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೀದಿ ದೀಪಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಆಡಳಿತಾತ್ಮಕ ಸಮಸ್ಯೆಗಳಿಂದ ತಿಂಗಳು ಕಳೆದರೂ ನಿರ್ವಹಣೆಯಾಗುತ್ತಿಲ್ಲ. ಈ ಬಗ್ಗೆ ಯಾವುದೇ ಹೊಸ ವ್ಯವಸ್ಥೆ ಅಳವಡಿಸದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕ್ಷೇತ್ರದ ಉದ್ಯಾನವನಗಳ ನಿರ್ವಹಣೆ ಸಂಪೂರ್ಣ ನಿಂತಿದೆ. ಅಭಿವೃದ್ಧಿ ಮಾಡಲಾಗಿದ್ದ ಉದ್ಯಾನವನಗಳೂ ಕೂಡ ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ. ಇದರಿಂದ ಅವ್ಯವಹಾರಗಳಿಗೆ ನಾಂದಿಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸ್ಮಶಾನಗಳ ನಿರ್ವಹಣೆ ಮತ್ತು ಸ್ವಚ್ಛತೆಯಲ್ಲಿ ಯಾವುದೇ ಕ್ರಮವಾಗುತ್ತಿಲ್ಲ. ಕೆಲವು ಸ್ಮಶಾನಗಳಲ್ಲಿ ಮರಣದ ಕುರಿತು ದಾಖಲೆ ಮಾಡುವ ಸಿಬ್ಬಂದಿಗಳಿಲ್ಲ. ಬೀದಿನಾಯಿಗಳಿಂದ ಆಗುತ್ತಿರುವ ತೊಂದರೆಗಳು ಹಾಗೂ ಮಸಸ್ಯೆಗಳ ಕುರಿತು ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದರೂ ನಗರಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನನ ಮತ್ತು ಮರಣ ಪ್ರಮಾಣಪತ್ರ ನೀಡುವಿಕೆಯಲ್ಲೂ ಜನಸಾಮಾನ್ಯ ಲಂಚಕೊಟ್ಟು ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ನಗರಪಾಲಿಕೆಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಎಲ್.ನಾಗೇಂದ್ರ, ಪಾಲಿಕೆಯ ಸದಸ್ಯರಾದ ಎಂ.ಸಿ.ರಮೇಶ್, ಬಿ.ವಿ.ಮಂಜುನಾಥ್  ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: